Thursday, June 16, 2011
ಪ್ರೀತಿ ಸ(ವ)ರಿದಾಗ.....!!
Monday, January 3, 2011
ಜೀವನಕ್ಕೆ ಒಂದೇ goal ಸಾಕಾ......?!
ಆದ್ರೆ ಒಂದೇ ಗುರಿ ಅಂತಿಟ್ಕೊಂಡಿರೋಕೆ ಸಾದ್ಯಾನಾ...?! ಇಲ್ಲ ಅನ್ಸುತ್ತೆ ಅಲ್ವಾ?... ಸುಳ್ಳು ಹೇಳ್ಬೇಡಿ.. ಅನ್ನಿಸ್ತಿದೆ ಅಲ್ವಾ...?! ನಾನು ಹೇಳ್ತಿರೋದೂ ಅದನ್ನೇ.. Open goals ಅಂತ.. ಹಾಗಂತ ಅದು ಸಿಕ್ಕ-ಸಿಕ್ಕಲ್ಲಿಗ ಚೌಕಟ್ಟ ಮೀರಿ ಹೊಡೆಯೋದಲ್ಲ.. ಚೆಂಡಿಂದ ಹೊಡೆಸಿಕೊಳ್ಳೋದೂ ಅಲ್ಲ.
Medical ಓದ್ತೀನಿ ಅಂತೀರಾ?.. ನಿಮ್ಮ financial condition ಒಪ್ಪಲ್ಲ ಅಂದ್ರೆ? ಏನಾಗುತ್ತೆ...? Loan ತಗೊಳ್ಳೋದಿದ್ರೂ property details ಕೇಳ್ತಾರೆ ತಾನೆ?... ಅದ್ಕೆ ಕಣ್ರೀ ಹೇಳೋದು- ಜೀವನದಲ್ಲಿ ನಾವು flexible ಆಗಿರ್ಬೇಕೂಂತ... Goalsಗಳ ವಿಷ್ಯದಲ್ಲೂ ಅಷ್ಟೇನೆ....!!!
ಒಂದೇ ಒಂದು goal ಸಾಲ್ದು...Alternate goals ಇರ್ಬೇಕು... ಹಾಗಂತ ಏನೇನೋ ಆಗಲು ಹೋಗಿ ಕಡೆಗೆ ಏನೂ ಆಗದಿರುವುದಲ್ಲ... ಎರಡು-ಮೂರುಗಳ ಕಡೆಗೆ ನಿದ್ದೆಗೆಟ್ಟು ಕಡೇಗೆ ಸಿದ್ದಿಸಿದ ಯಾವ್ದೋ ಒಂದಕ್ಕೆ ಬಧ್ಧನಾಗೋದು, best ಅನ್ನಿಸಿಕೊಳ್ಳೋದು- ಇದೇ ಇಲ್ಲಿನ ಸಿದ್ದಾಂತ. ಅಷ್ಟೆ!!
ಸುಮ್ನೆ collegeನಿಂದ ಮಂಗ್ಳೂರಿನ Idealsಗೆ ಅಂತ ಹೊರ್ಟಿರ್ತೀರ... ಅದ್ಯಾವುದೋ ಒಂದು auto ಸಿಗುತ್ತೆ... ಆತ 'ಅನಂತಶಯನ' ಅಂತಾನೆ...OK ಹತ್ಕೊಳ್ಳಿ.... ಅಲ್ಲಿ ಮುಟ್ಟೋವಾಗ 'ಛೆ! bus standನಿಂದಾಗಿದ್ರೆ seat ಸಿಗ್ತಿತ್ತು' ಅಂದ್ಕೋತೀರಿ... ಅಷ್ಟ್ರಲ್ಲೇ ಸ್ನೇಹಿತನ bike ಸಿಗುತ್ತೆ...bus standನಲ್ಲಿ 'ಯಾಕೋ ಮುಲ್ಕಿ ಕಡೆಯಿಂದ ಹೋಗೋದೇ better' ಅನ್ಸುತ್ತಾ...? ಹಾಗೇ ಮಾಡಿ... ಬಸ್ಸು ಬಿಡೋ ಮುಂಚೆ ಲಾಲಿ ಮಾರೋ ಹುಡ್ಗ ಬಂದ್ರೆ.. ಬೇಕು ಅನ್ನಿಸಿದ್ರೆ ಅದನ್ನೂ taste ಮಾಡಿ... ನೀವು Lalbaugh ಮುಟ್ಟೋಸ್ಟ್ರಲ್ಲಿ traffic block..... bus ಮುಂದಕ್ಕೆ ಹೋಗಲ್ಲ ಅಂತಾರಾ?! Don’t worry...ಚೆನ್ನಾಗಿರೋ ice cream ತಾನೆ ಬೇಕಾಗಿರೋದು? ಇಳಿದು Pabbasಗೆ ಹೋಗ್ಬಿಡಿ.. ಅಷ್ಟೆ!! ಸ್ವಲ್ಪ dynamic ಅಥ್ವಾ flexible ಆಗಿರ್ಬೇಕಷ್ಟೆ!!!
ಈ open goals ಅನ್ನೋದು ಹುಚ್ಚರತರ ಎಲ್ಲೆಲ್ಲೋ ಹೋಗೋದಲ್ಲ... ಮನದಾಳದಲ್ಲಿ Astrophysicist ಆಗ್ಬೇಕಂದ್ಕೊಂಡು, Chemistryಲಿ Phd ಮಾಡ್ಕೊಂಡು, ಸುಮ್ನೆ primary ಶಾಲೆ physical director ಆಗ್ಬಿಡೋದಲ್ಲ. ಆತರ ಆಗ್ಲೂಬಾರ್ದು. ಅದ್ಕೆ ಮಾಡ್ಬೇಕಾದ್ದು ಇಷ್ಟೆ-' ಮಂಗ್ಳೂರು ಕಡೆ ಬಸ್ಸು ready ಇಲ್ಲ ಅಂತ ನಾರಾವಿ ಕಡೆ ಬಸ್ಸಿಗೆ ಹತ್ತದಿರೋದು!!'. ನಿಮ್ಮ goal ಮಂಗಳೂರು ಆಗಿದ್ರೆ aim ಕೂಡಾ ಅದೇ ಕಡೆಗೆ ಇರ್ಬೇಕು... ಕಡೇಗೆ journey ಕೂಡಾ!. ‘Aim the star at least you will land at the moon’- ಅಂತಾರಲ್ಲ ಆಥರ. Astrophysicist ಅಲ್ದಿದ್ರೆ ಬರೇ Physicist ಆಗಿ, ಅಥ್ವಾ Physics ಮೇಸ್ಟ್ರಾದ್ರು ಆಗ್ಬಿಡಿ...Enjoy ಮಾಡ್ರೀರ!! ಜೊತೆಗೆ ಒಂದಷ್ಟು Astrophysicistರನ್ನ ನೀವೇ produce ಮಾಡ್ಬೋದು!!!
ಒಂದು ಹುಡ್ಗಿ Hollywood heroin ಆಗ್ಲೇಬೇಕಂದ್ಕೊಂಡ್ರೆ-ಆಗೇ ಬಿಡ್ತಾಳಾ? ಅದ್ಕೆ-Look ಮತ್ತು Luck ಎರಡೂ ಕೂಡಿ ಬರಬೇಕಲ್ವಾ? ...Luck ಆಕೇನ Hollywoodಗೆ ಮುಟ್ಸಲ್ಲ ಅಂತಿದ್ರೆ... ಆಕೆಯ 'ಕನಸಿನ kick', ಆಕೇನ modellingಗೆ ಇಳಿಯಲೂ ಬಿಡುತ್ತಿಲ್ಲ ಅಂತಾದ್ರೆ.. ಆಕೆ ಏನಾಗ್ತಾಳೋ...? ಏನೇನೂ ಆಗಲ್ಲ ಅಲ್ವಾ? '... ಸದ್ಯಕ್ಕೆ modelling ಆದ್ರೂ OK’ ಅಂತಿದ್ರೆ, ಕಡೆಗೆ Bollywoodಗಾದ್ರೂ ಮುಟ್ತಿದ್ಳೋ ಏನೋ?! ಈಗ ಹೇಳಿ flexibility ಬೇಡ್ವಾ? Bollywoodನಲ್ಲಾದ್ರೂ famous ಆಗಿ No.1 success ಅನ್ನಿಸಿಕೊಂಡ್ರೆ ನಷ್ಟ ಇದ್ಯಾ?
ವಿಷ್ಯ ಇಷ್ಟೆ- ‘Choose the best one at each stage of your life, ultimately you will reach to the best of what you really deserve’.
Sunday, December 5, 2010
ಆ ಎರಡು ಕವನಗಳು :~
ಗೆಳತಿಗೆ.....
ದೂರವಾಗಬಲ್ಲೆ ನೀ ಗೆಳತಿ
ನನ್ನ ಸಾಮಿಪ್ಯದಿಂದ ಮಾತ್ರ.
ದೂರವುಳಿಯಲಾರೆ ನೀ ಗೆಳತಿ
ಎಂದೆಂದೂ ನನ್ನ ಹೃದಯದಿಂದ
ಬಾನಲ್ಲಿ ಇರುವವರೆಗೆ-ನಕ್ಷತ್ರ||
ಜೊತೆಯಾಗಿರಲು ನನ್ನ ನೀ ಗೆಳತಿ,
ಕಾಲ ಬಿಡದಿರಬಹುದು ಈಗ.
ಚಿಂತಿಸದಿರು ನಾ ಮರೆಯಲಾರೆ
ನಿನ್ನ, ನೀ ಜೊತೆಗಿಲ್ಲವೆಂದು
ಈ ಭುವಿ-ರವಿ-ಚಂದ್ರರಿರುವಾಗ||
ನೀ ನನ್ನ ಜೊತೆಯಲ್ಲೇ ಇರುವೆ
ನನ್ನೆದೆಯ ಗೂಡಿನಲಿ ಭದ್ರವಾಗಿ.
ನನ್ನಾಣೆ, ನಿನ್ನಾಣೆ ಗೆಳತಿ ನೀ ಎಂದೂ
ನೀನಲ್ಲಿಯೇ ಇರುವೆ, 'ಇದು ಖಂಡಿತ'
ಒಡೆವವರೇಗೆ ನನ್ನೆದೆ ಛಿದ್ರವಾಗಿ||
ಜೊತೆಯಾಗಿರಲು ಬಿಡದು ಮುಂದೆ
ಈ ಸಮಾಜದ ದುರ್ನೀತಿ-ರೀತಿಗಳು.
ಅವಕರ್ಥವಾಗದು-'ಸ್ನೇಹದ ಬೆಲೆ'
ಜಾತಿ-ನೀತಿ-ಸಂಪತ್ತುಗಳೇ, ಅವಕೆ
ಕಾಣಿಸುವುದು-ಹಗಲಿರುಳು||
ಕೊನೆಗರ್ಥವಾಯಿತು ಗೆಳತಿ,
ನನಗೀ ಲೋಕದ ಕುರುಡು-ಸತ್ಯ.
ಪ್ರಳಯವಾದೀತು ಜೊತೆಯಿರಲು
ನಾವು, ನಾ ಭುವಿಯಾಗಿರಲು
ನೀ ತಾರೆಯಾಗಿರಲು ನಿತ್ಯ||
ಗೆಳತಿ ನಾನರಿಯೆ, ನೀ ಹೇಗೆ ನನ್ನಿಂದ
ದೂರ-'ಉಳಿಯ'ಬಲ್ಲೆಯೆಂದು.
ನಾ ಬೆಂಕಿಯಾಗಿ, ನೀ ನೀರಾಗಿರಲು,
ಬಹುಶಃ ನಾವು ಜೊತೆಯಾಗಿದ್ದು,
ಆಗ ನಾನಿಲ್ಲದಾಗಬಾರದೆಂದು||
ನೀ'ನೊಂದು' ದಡವಾಗಿರಲು
ನಾನೊಂದು ದಡವಾಗಿರುವುದೆಂತು?
ಆದರೂ ದಡಗಳೊಂದಾದರೆ
ನಡುವೆ ನಮ್ಮ ಜೀವನದ
ನದಿ ಹರಿಯುವುದೆಂತು?||
ಚಂದ್ರ ಸಮುದ್ರಕ್ಕಿಳಿಯದ
ಮಾತ್ರಕ್ಕೆ ಸ್ನೇಹವಿಲ್ಲವೇನು?
'ಆತನಿಳಿದು ಬರಲಿಲ್ಲ'ವೆಂಬ ಮಾತ್ರಕ್ಕೆ
ಆತ ಬರುವುದ ನೋಡಿ, ಅದು
ಉಕ್ಕುವುದ ಮರೆತಿರುವುದೇನು?||
ನಿನಗಿದು ವಿಚಿತ್ರವೆನಿಸಬಹುದು-
ಆದರೂ ನನ್ನ ಸಲಹೆಯಿದು,
ನಾ ಒಳಿತೆಸಗಿದೊಡೆ, ನೀನೂ
ಒಳಿತೆಸಗು, ಸ್ವರ್ಗವೆಂಬುದಿರೆ
ಅಲ್ಲಿ ಜೊತೆಯಾಗಿರಬಹುದು||
ನಿನಗಿದು ಬಲು ಕಠಿಣವಿರಬಹುದು,
ಆದರೂ ನನ್ನ ಮನ ಬೇಡುತಿಹುದು.
ನಾ ಕೆಡುಕೆಸಗಿದೊಡೆ, ನೀನೂ.....
ಕೆಡುಕೆಸಗಲಾರೆಯಾ..?! ನರಕವಿದ್ದರೆ
ಅಲ್ಲಿಯಾದರೂ ಜತೆಗಿರಬಹುದು||
ಮುಂದೊಮ್ಮೆ ಜನ್ಮವಿರೆ ಗೆಳತಿ,
ನೀ ಗಂಡಾದರೆ, ನಾ ಗಂಡಾಗುವೆನು.
ನಿನ್ನ ನೆರೆಮನೆಯಲ್ಲಿಯೇ, ಮತ್ತೆ
ಜನಿಸುವೆನು, ದೂರಹೋಗದುಳಿವೆ
ಪ್ರಾರ್ಥಿಸು(ವೆ) ದೇವರಿರುವನು||
ಗೆಳತಿಯ ನೆನಪಿನಲ್ಲಿ.....
ಓ ಗೆಳತಿ,
ನಿನ್ನೊಂದಿಗೆ ಕಳೆದ
ಸುಂದರದಿನಗಳ
ಬರುವುದು
ನೆನಪು
ಕೆಲವೊಮ್ಮೆ ನಗು
ಕೆಲವೊಮ್ಮೆ ಜಗಳ
ಕೆಲವೊಮ್ಮೆ ಹುಸಿ
ಮುನಿಸು
ಈಗ ನೀನು
ಹತ್ತಿರವಿಲ್ಲ
ಆದರೂ ಕಾಯುತ್ತಿದ್ದೇನೆ-
ನೀನು ಹಿಂತಿರುಗಿ
ಬರುವೆಯಲ್ಲ?
ನಿನಗೆ ನೆನಪಿದೆಯಾ
ಗೆಳತಿ
ನಾವು ಸುತ್ತಾಡಿದ
ಸ್ಥಳಗಳು
ಎಷ್ಟೊಂದು ಮಧುರ
ಆ ದಿನಗಳು.
ನಮ್ಮ ಸ್ನೇಹ ನೋಡಿ
ಎಷ್ಟು ಜನ
ಕರುಬಿದ್ದರು
ಎಷ್ಟು ಜನ
ಅನುಮಾನದ
ಬಹುಮಾನ
ಕೊಟ್ಟಿದ್ದರು.
ಬಹಳಷ್ಟು
ಜನ ಪ್ರೇಮದ
ಪಟ್ಟ ಕಟ್ಟಿದ್ದರು.
ಈ ಪ್ರಪಂಚಕ್ಕೆ
ಗಂಡು ಹೆಣ್ಣಿನ
ಸ್ನೇಹ ಸಂಬಂಧ ತಿಳಿಯದು
ಗೆಳತಿ
ಅದಕ್ಕೆಂದೂ ಕಾಣುವುದು
ಬರೇ ಪ್ರೇಮ-ಕಾಮ.
ಅದೇನಿದ್ದರೂ ನೋದುವುದು
ಒಂದೇ ರೀತಿ....
ಯಾರು ಏನೇ ಅನ್ನಲಿ,
ಅಂದುಕೊಳ್ಳಲಿ...
ನಮ್ಮ ಸ್ನೇಹ
ನಿತ್ಯ ನೂತನ
ನಿತ್ಯ ಚೇತನ
ಅದೇ ನನ್ನ ಜೇವನಕ್ಕೆ
ಸ್ಪೂರ್ತಿಯ
ಸಿಂಚನ.
ಮೇಲಿನೆರಡು 'ಕವನ'ವೆನ್ನಿಸುವವುಗಳನ್ನು ಒಮ್ಮೆ ಓದಿನೋಡಿ, ಕವನದಲ್ಲೇನು ವಿಶೇಷವಿಲ್ಲ. ಅದನ್ನು ಗೀಚಿದ್ದು ನನ್ನ ಪ್ರಥಮ ಪದವಿಯ ಆರಂಭದ ದಿನಗಳಲ್ಲಿ. ಇತ್ತೀಚೆಗೆ ಏನೋ ಹಳೇ ಪುಸ್ತಕಗಳೆಡೆಯಲ್ಲಿ ಹಾಳೆಯೊಂದು ಸಿಕ್ಕಿತು. ಅದರಲ್ಲಿ ಆ ಎರಡು ಕವನಗಳಿದ್ದುವು- ಒಂದು ನಾನು ಬರೆದುದು, ಎರಡನೆಯದ್ದು ನನ್ನ ಸ್ನೇಹಿತನದ್ದು, ಎರಡೂ ಪ್ರತ್ಯೇಕವಾಗಿ ಒಂದನ್ನೊಂದು ನೋಡದೇ ಪೂರ್ಣ ಸ್ವಂತವಾಗಿ ಮೂಡಿಬಂದುವಾದರೂ, ಎರಡರದ್ದೂ ಮೂಲಸಾರ ಒಂದೇ, ವಿಷಯವೂ ಒಂದೇ ಅದನ್ನಾತ ತೋರಿಸಿದ್ದಾಗ ನಾನು ಗರಬಡಿದವನಂತೆ ನಿಂತಿದ್ದೆ ಆದಿನ, ನನ್ನದಕ್ಕಿಂತಲೂ ಆತನ ಕವನವೇ ನನಗೆ ಹೆಚ್ಚು ಇಷ್ಟವಾಯಿತು........ ಅಂದ ಹಾಗೆ ಇದು ನನ್ನ ಮೊತ್ತ ಮೊದಲ ಕವನ.
ಅಂದಹಾಗೆ ಅವನೂ ಈ ಸಾಲುಗಳನ್ನ ಅದೇ ಹಾಳೆಯ ಮೇಲೆ ಪೋಣಿಸಿದ ಮೇಲೆ, ನಾನು ಕೆಳಗೆ ಬರೆದಿದ್ದೆ...
“ವ್ಯತಾಸ ಇಷ್ಟೇ.... ನಂದೊಂತರಾ ಪಲಾಯನ ಧೊರಣೆಯಾದರೆ... ನಿಂದೊಂತರಾ daringness ಕಣೋ..”
Monday, December 7, 2009
Monday, November 23, 2009
ಆತ ಮಗ್ಗುಲು ಬದಲಾಯಿಸಿದಾಗ....
Friday, July 17, 2009
ನಿನ್ನ ಪ್ರೀತಿಯಲಿ.....(?!)
ಸುಮ್ನೆ ಇದ್ರ ಬಗ್ಗೆ....
ಹೊಸತನದಲ್ಲೇನು ಹೊಸತಿದೆ?-ಅಂದ್ರೆ...ಏನೂ ಇಲ್ಲ...ಸದ್ಯಕ್ಕೆ ಎಲ್ಲಾ ಹಳೇದೆ!!!
