ಆದ್ರೆ ಸುಮ್ನೆ ಅವುಗಳಿಗೆ
ಹೇಗೆ ಬೆಂಕಿಯಿಡಲಿ...?!
ಅಲ್ಲಿ ನೀನೂ ಇಲ್ಲವೇನು?!
ಗೆಳತೀ ನೀನಾ ಉರಿಯಲ್ಲಿ
ಬಿಸಿಗೆ ಬೇಯಬಾರದಲ್ವೆ?
ನನ್ನ ಮನಸ ಕನ್ನಡಿ
ಬಿಸಿ ತಟ್ಟಿ ಒಡೆಯುತ್ತಿದೆ
ನಿನ್ನ ಮನಸು........
ಮುದುಡುತ್ತಿಲ್ಲವೇನೆ ?!
............
ನಿನ್ನ ಭಾವನೆಗಳ
ಎತ್ತಿಟ್ಟು ಹೊತ್ತಿಸೆಂದೆಯಲ್ಲಾ ?
ಆ ನೋವ-ಬೆಂಕಿ ಭಾವದಲ್ಲೇ
ಎದೆಯಲ್ಲಿ ಉರಿಯನೆಬ್ಬಿಸಿದೆ.
ಕಣ್ಣೀರು ಇಟ್ಟರೂ ಬೆಂಕಿ
ಆರಲಿಲ್ಲ ...ಆರುತ್ತಿಲ್ಲ
ಹೇಗೆ ಆರುತ್ತೆ.......?!
ಎದೆಗೂಡಿಗೇನೆ ಬೆಂಕಿ
ಹತ್ತಿ-ಹರಡಿಕೊಂಡಿರುವಾಗ?!
.............
ಎದೆಯಲ್ಲಿ ಕಾಮವಿಲ್ಲ
ಆದರೂ ಹೋಮವಿಟ್ಟೆ...
ಭಾವನೆಗಳ ಬದಿಗೊತ್ತಿ
ಒತ್ತಿ-ಬತ್ತಿಸಿದೆ.....!!!
ನಿನ್ನಾಸೆಯಲ್ಲವೇ ಅದಕ್ಕೇ...
ನನ್ನೆದೆಯ ಹೋಮಕುಂಡ
ಇನ್ನೂ ಆರಿಲ್ಲ...ಬಹುಷ.....
ಮನದ ಬೇಗುದಿಯಲ್ಲಿ
ಬೇಯುತ್ತಲೇ ಇರುವೆ.....
ನಿನ್ನ ಮರೆಯುತ್ತಿರುವೆ ..?!
ಆದರೂ ನೋಯುತ್ತಿಲ್ಲ.....
ನಿನಗಾಗಿ ತಾನೇ.......?!
ನಿನ್ನಿಚ್ಚೆ ಅದೇ ತಾನೇ....
..............
ಈ ಎದೆಯ ದಳ್ಳುರಿಯ
ಬೂದಿಗೂ ಎಂದಾದರೂ
ಬೇಕೆನಿಸಿದರೆ ಕೇಳಿ ನೋಡು...
ಅದೂ ನಿನ್ನ ಪ್ರೀತಿಸುತ್ತಿರುವುದು ..
ಪ್ರೀತಿಸ್ತಾನೆ ಇರುವುದು...
ನಿನ್ನ ಪಡೆವ ಹಂಬಲವಿಲ್ಲ
ಆದರೂ.....................
ಯಾಕೆಂದರೆ..............-
"ಪ್ರೇಮವೆಂದರೆ ಕಾಮವಲ್ಲ"
Tuesday, August 19, 2008
Subscribe to:
Post Comments (Atom)
No comments:
Post a Comment