ಹಾರು ಹಕ್ಕಿಯೇ ಹಾರು ಬಾನೆತ್ತರಕೆ,
ಹಾರು, ಮುಗಿಲ ಮೇಲೇರಿ ಹಾರು,
ಹಿಂತಿರುಗಿ ನೋಡದಿರು, ಹಾರು ರವಿಯೆಡೆಗೆ,
ನಿನ್ನಾಸೆಗಳ ಗರಿಬಿಚ್ಚಿ, ಮನಮೆಚ್ಚಿ ಹಾರು,
ಆದರೂ...., ಗೂಡ ಮರೆಯಬೇಡ...!
ನೀನುಂಡ ಕಾಡ ಮರೆಯಬೇಡ.......!!
ನೀನಾಡಿದ ನಾಡ ಮರೆಯಬೇಡ.....!!!
ನೀಮಿಂದ ತೋಡ ಮರೆಯಬೇಡ....!!!!
ಹಾರು ಹಕ್ಕಿಯೇ ಹಾರು ದಿಗಂತದಾಚೆಗೆ,
ಹಾರು, ಗುಡ್ಡ-ಬೆಟ್ಟಗಳ ಮೀರಿ ಹಾರು,
ನೋವುಗಳೆಲ್ಲವ ಮರೆತು ಹಾರು, ಕಡಲದಾಟಿ,
ಮಧುರಭಾವನೆಗಳ ಮಾತ್ರ, ಹೃದಯಮೀಟಿ,
ಆದರೂ...... ನಿನ್ನವರ ಮರೆಯಬೇಡ...!
ತುತ್ತನಿತ್ತವರ ಮರೆಯಬೇಡ...............!!
ನಿನ್ನ ನೋವಿಗತ್ತವರ ಮರೆಯಬೇಡ.....!!!
ನಿನ್ನ ಹೊತ್ತವಳ, ಹೆತ್ತವರ ಮರೆಯಬೇಡ!!!!
ನೀನಿಂದು ಉಬ್ಬಿರಬಹುದು, ಕೊಬ್ಬಿರಬಹುದು,
ಹೊಸಲೋಕದೊಳಗೊಬ್ಬನಾಗಿ ಉಳಿಯಬಹುದು,
ಆದರೂ ಮರೆಯದಿರು-ನೀನಲ್ಲಿ "ಪರಕೀಯ".....!
ಹೊಸಲೋಕದಲ್ಲೆಂದೂ ನೀನು "ಹೊಸಬ"......!!
ಮುಂದೊಮ್ಮೆ ಮನಬಿಚ್ಚಿ ಹಾರಬಹುದು,
ಈ ಭುವಿಯೆಡೆಗೆ, ದಿಗಂತದೀಚೆಗೆ,
ಅದಕ್ಕಾದರೂ ಈ ಗೂಡ ಮರೆಯದಿರು,
ಈ ಕಾಡು, ಗೂಡು ನಿನಗಾಗಿ ಕಾಯುವುದು!!
~:ಇದು ಮನೆ ಬಿಟ್ಟು ದೇಶ ಬಿಟ್ಟು, ಕೊನೆಗೆ ಕಲಿತ ಮೂಲ ವಿಧ್ಯೆಯನ್ನೂ ಬಿಟ್ಟು ಸುಮ್ನೆ ಜೀವಿಸುತ್ತೇವೆ ಅನ್ನೋ ಮನೋಭಾವದವರಿಗಾಗಿ.....
~:ಇದು ಮನೆ ಬಿಟ್ಟು ದೇಶ ಬಿಟ್ಟು, ಕೊನೆಗೆ ಕಲಿತ ಮೂಲ ವಿಧ್ಯೆಯನ್ನೂ ಬಿಟ್ಟು ಸುಮ್ನೆ ಜೀವಿಸುತ್ತೇವೆ ಅನ್ನೋ ಮನೋಭಾವದವರಿಗಾಗಿ.....
No comments:
Post a Comment