Tuesday, August 26, 2008

Lesson of the Life

ಕ್ಷಮೆ

ಯಾಚಿಸದೆ ನೀಡಿದ

ಕ್ಷಮೆಗಿಂತ ಕಠಿಣ

ಶಿಕ್ಷೆ ಬೇರಿಲ್ಲ....!!!

Tuesday, August 19, 2008

ಎದೆಯಾಳದಲ್ಲಿ......!!!?

ಆದ್ರೆ ಸುಮ್ನೆ ಅವುಗಳಿಗೆ
ಹೇಗೆ ಬೆಂಕಿಯಿಡಲಿ...?!
ಅಲ್ಲಿ ನೀನೂ ಇಲ್ಲವೇನು?!
ಗೆಳತೀ ನೀನಾ ಉರಿಯಲ್ಲಿ
ಬಿಸಿಗೆ ಬೇಯಬಾರದಲ್ವೆ?
ನನ್ನ ಮನಸ ಕನ್ನಡಿ
ಬಿಸಿ ತಟ್ಟಿ ಒಡೆಯುತ್ತಿದೆ
ನಿನ್ನ ಮನಸು........
ಮುದುಡುತ್ತಿಲ್ಲವೇನೆ ?!
............
ನಿನ್ನ ಭಾವನೆಗಳ
ಎತ್ತಿಟ್ಟು ಹೊತ್ತಿಸೆಂದೆಯಲ್ಲಾ ?
ಆ ನೋವ-ಬೆಂಕಿ ಭಾವದಲ್ಲೇ
ಎದೆಯಲ್ಲಿ ಉರಿಯನೆಬ್ಬಿಸಿದೆ.
ಕಣ್ಣೀರು ಇಟ್ಟರೂ ಬೆಂಕಿ
ಆರಲಿಲ್ಲ ...ಆರುತ್ತಿಲ್ಲ
ಹೇಗೆ ಆರುತ್ತೆ.......?!
ಎದೆಗೂಡಿಗೇನೆ ಬೆಂಕಿ
ಹತ್ತಿ-ಹರಡಿಕೊಂಡಿರುವಾಗ?!
.............
ಎದೆಯಲ್ಲಿ ಕಾಮವಿಲ್ಲ
ಆದರೂ ಹೋಮವಿಟ್ಟೆ...
ಭಾವನೆಗಳ ಬದಿಗೊತ್ತಿ
ಒತ್ತಿ-ಬತ್ತಿಸಿದೆ.....!!!
ನಿನ್ನಾಸೆಯಲ್ಲವೇ ಅದಕ್ಕೇ...
ನನ್ನೆದೆಯ ಹೋಮಕುಂಡ
ಇನ್ನೂ ಆರಿಲ್ಲ...ಬಹುಷ.....
ಮನದ ಬೇಗುದಿಯಲ್ಲಿ
ಬೇಯುತ್ತಲೇ ಇರುವೆ.....
ನಿನ್ನ ಮರೆಯುತ್ತಿರುವೆ ..?!
ಆದರೂ ನೋಯುತ್ತಿಲ್ಲ.....
ನಿನಗಾಗಿ ತಾನೇ.......?!
ನಿನ್ನಿಚ್ಚೆ ಅದೇ ತಾನೇ....
..............
ಈ ಎದೆಯ ದಳ್ಳುರಿಯ
ಬೂದಿಗೂ ಎಂದಾದರೂ
ಬೇಕೆನಿಸಿದರೆ ಕೇಳಿ ನೋಡು...
ಅದೂ ನಿನ್ನ ಪ್ರೀತಿಸುತ್ತಿರುವುದು ..
ಪ್ರೀತಿಸ್ತಾನೆ ಇರುವುದು...
ನಿನ್ನ ಪಡೆವ ಹಂಬಲವಿಲ್ಲ
ಆದರೂ.....................
ಯಾಕೆಂದರೆ..............-
"ಪ್ರೇಮವೆಂದರೆ ಕಾಮವಲ್ಲ"

Wednesday, August 13, 2008

ಆಸರೆ

ಬುಡವಿಲ್ಲದ ಗಿಡ
ಬಳಿ ಬಂದ ಬಳ್ಳಿಗೆ
ಆಸರೆಯಾಗುವುದೆಲ್ಲಿಂದ...??!!

Tuesday, August 12, 2008

ನೆರಳು

ಭಾವನೆಗಳ ಹಸಿರೆಲೆಗಳೆಲ್ಲ
ಉದುರಿ ಹೋದ ಮೇಲೆ
ಹೆಮ್ಮರವಾದರೂ ಸಹ
ನೆರಳ ನೀಡಬಲ್ಲುದೆ..??!

Friday, August 8, 2008

Simply ಒಂದು ಮಾತು....!!!

ಯಾಕೋ....ಕೈ ನಡುಗುತ್ತಿದೆ ಕಣ್ರೀ....around ಒಂದು ವರ್ಷದ ನಂತರ pen ಹಿಡಿದಿದ್ದೇನೆ.... ಏನೇನೊ ಹುಚ್ಚು ಗೀಚುವ ಗೀಳಿಂದ ಹೊರಬಿದ್ದಿದ್ದೆ..ಏನೋ ಕಳಕೊಂಡಿದ್ದೆ....ಇದರೆಡೆಯಲ್ಲಿ ಏನೇನನ್ನೋ ಹುಡುಕುತ್ತಾ ಹೋದೆ....ಏನೇನೆಲ್ಲಾ ಪಡಕೊಂಡೆ ...ಒಂದಷ್ಟನ್ನ ಕಳಕೊಂಡೆ.....!!

ಹೌದ್ರೀ! ಈ life ಅಂದ್ರೆ ಹೀಗೇನೆ...ವಿಚಿತ್ರ ಅನ್ಸುತ್ತೆ...ಕೆಲವೊಂದು climatesಗೆ, environmentಗೆ ಒಗ್ಗುವ, ಬಗ್ಗುವ, ತಗ್ಗುವ ಬರದಲ್ಲಿ, ನಮ್ಮತನವನ್ನೇ ಕಳ್ಕೊಂಡ್ಬಿಡುತ್ತೇವೆ....ನಾವೇನೋ ಆಗಲು ಹೋಗಿ...ಇನ್ನೇನೋ ಆಗಿ ಬಿಡ್ತೇವೆ. ಅಬ್ಬಾ! ಒಂದು ವರ್ಷದಲ್ಲಿ ಏನೇನೆಲ್ಲ ಆಗೋಯ್ತು.... Universityಯಿಂದ Universityಗೆ shift ಆದ ಕೂಡ್ಲೇ...?!! ಒಂದಷ್ಟು ಹೊಸ friends ಸಿಕ್ಕಿದ್ರು...ಒಂದಷ್ಟು friends ದೂರಾಗಿಬಿಟ್ರು ...ಹಳೇ friends ಮರಳಿ ಸಿಕ್ಕಿದ್ರು...!! ಮನಸ್ಸಿಗೆ ಅಂಟಿಕೊಂಡಿದ್ದವರು, ಇನ್ನೂ ಹೃದಯದಲ್ಲಿಯೇ ಠಿಕಾಣಿಹೂಡಿದ್ದಾರೆ ಬಿಡಿ...ಆ ನಂಟಿನಲ್ಲಿಯೇ ಒಂಟಿತನದ ಕೊರಗು ಕರಗುತ್ತೆ...ಮನದ ಮರುಗು ಮರೆಯಾಗುತ್ತೆ.....!!!


ಜೀವಕ್ಕೆ ಜೀವವಾಗಿದ್ದ friends, ಜೀವನದಲ್ಲಿ ಭಾವನೆಯನ್ನೆಬ್ಬಿಸಿದವರೂ, ಎದೆಯಲ್ಲೆಲ್ಲೋ trust ಎಂದರೇನೆಂದು ತೋರ್ಸಿದವರೂ,....trust ಮಾಡದವರೂ.....hurt ಮಾಡಿದವರೂ........sweetness ನೀಡಿದವರೂ......ಕನಸು ಮೂಡಿಸಿದವರು,ತೋಡಿಕೊಂಡವರೂ....ಎಲ್ಲರೂ......ಮುಂಚಿದ್ದವರು.....ಮಿಂಚಿ ಹೋದವರೂ......ಹಂಚಿ ಕೊಳ್ಳುವವರು....ಸಂಚು ಹಾಕಿದವರೂ .....ಎಲ್ಲ mix ಆಗ್ತಿದ್ದಾರೆ........!!

ಏನೆಲ್ಲ ನೋಡ್ಬಿಟ್ಟೆ ಕಣ್ರೀ.... EDUCATION SYSTEMನ Greatnessನ್ನ (?!)..... Universityಯ ಜಂಜಾಟವನ್ನ ....ಎಲ್ಲಾ!State, Caste,Religionsಗಳ Basisನ ಒಂದಷ್ಟು ಅನ್ಯಾಯದ rules-categoriesನ ಗೋಜಲುಗಳನ್ನೊಂದಿಷ್ಟು ಅನುಭವಿಸಿದೆ ....ಮುಖ್ಯವಾಗಿ ಸುಮ್ಮನಿರಲು ಕಲಿತೆ.....!! ನಲಿವಿನಲ್ಲೂ ನೋವನ್ನೂ...painsನಲ್ಲೂ gainsನ್ನು.....hatredನಲ್ಲೂ loveನ್ನು... hurtನಲ್ಲೂ healನ್ನು...ಎಲ್ಲಾ feel ಮಾಡ್ದೆ.....ಏನೇನನ್ನೆಲ್ಲಾ ಕಳಕೊಂಡೆ-....ನನ್ನ ಬರವಣಿಗೆಯನ್ನ...thoughtsನ್ನ...ನನ್ನತನವನ್ನು....ನನ್ನ friendನ trustನ್ನ ...careನ್ನ.... concernನ್ನ.... ನನ್ನ ಪ್ರೀತಿನ.....ಮುಖ್ಯವಾಗಿ ನನ್ನದೆಲ್ಲದಕ್ಕೆ "go ahead" ಅಂತ NOD ಮಾಡ್ತಿದ್ದ ನನ್ನ ತಂದೆಯನ್ನ......


ಯಾರ್ಯಾರದೋ ಕಣ್ಣೀರು ಒರೆಸಿದ್ದೇನೆ.....ಯಾವ್ಯಾವುದ್ದಕ್ಕೋ ಕಣ್ಣೀರು ಸುರಿಸಿದ್ದೇನೆ.....!!ಏನೇನೊ ಭಾವನೆಗಳ ಬೆಳೆಸಿಕೊಂಡೆ....ಕೆಲವನ್ನ ಅಳಿಸಿಕೊಂಡೆ....ಒಂದಸ್ಟು ಜನಕ್ಕೆ hurt ಮಾಡ್ದೆ....ಒಂದಷ್ಟು ಜನಕ್ಕೆ heal ಮಾಡ್ದೆ....ಯಾರನ್ನೋ ಇಷ್ಟ ಪಟ್ಟೆ....ಯಾರಿಗೋ ಕಷ್ಟ ಕೊಟ್ಟೆ...ಯಾರ್ಯಾರಿಗೋ advice ಮಾಡ್ದೆ....ಯಾರನ್ನೋ care ಮಾಡ್ದೆ....ಏನೇನನ್ನೋ neglect ಮಾಡ್ದೆ....ಏನೇನೊ situationsನ face ಮಾಡ್ದೆ....ನನ್ನ ತಂದೆ ಚಿತೆ ಪಕ್ಕದಲ್ಲಿದ್ದೆ..ರಾತ್ರಿ ಹತ್ತಾಗಿರಬಹುದು, ನನ್ನ friend call ಮಾಡಿ ಕೇಳಿದಳು 'ತಂದೆ ಹೇಗಿದ್ದಾರೆ??'- ಏನನ್ಲಿ ನಾನು?... ಚಿತೆಯಲ್ಲಿ ಅಷ್ಟರಲ್ಲೇ ಎದೆಗೂಡಿಗೆ ಬೆಂಕಿ ಹತ್ತಿಕೊಂಡಿತ್ತು.ಅದರ ಮೇಲೆ final exams ಬೇರೆ ಗೀಚ್ಲೇಬೇಕಾದ time....ಸುಮ್ನೆ friendಗೆ ಒಂದು call ಮಾಡಿದ್ದ್ರೆ ಉತ್ರ-' ಸುಮ್ನೆ ಹೋಗಿ ಮಲ್ಕೋ disturb ಮಾಡ್ಬೇಡ'....ಎಲ್ಲಾ ಈಗ ಹಳೇ ಕತೆ! ಹಾಂ!!..ನನ್ನ Trustನ ಮೇಲಿನ trustನ್ನೇ ಕಳಕೊಳ್ಳೋ momentsನಲ್ಲೂ ಸುಮ್ನೆ trust ಮಾಡ್ತಾನೆ ಹೋದೆ....!! ಇವತ್ತೂ ಅದನ್ನೇ ಮಾಡ್ತೀನಿ ಎಸ್ಟೋ ಸುಳ್ಳುಗಳ ಮೇಲೂ....!! ಕೆಲವರ್ನ ಸುಮ್ನೆ ನಂಬ್ತೀನಿ ....ಅದರಲ್ಲೂ ಒಂತರಾ ಸುಖ ಇದೆ ಕಣ್ರೀ.....!!!

ಜೀವನ ಅಂದ್ರೆ ಒಂದಸ್ಟು ವರುಷ ಬದುಕಿದ ಬರಡು ನೆನಪಿನ ಭಂಡಾರವಲ್ಲ, ಅದೊಂದಷ್ಟು ಬವಣೆ-ಬಾವನೆಗಳನೋವು-ನಲಿವುಗಳ ಸಮ್ಮಿಲನ......!!!