Monday, December 7, 2009

Monday, November 23, 2009

ಆತ ಮಗ್ಗುಲು ಬದಲಾಯಿಸಿದಾಗ....

ಇದು ಸುಮ್ನೆ ಒಂದು comment....

ಅಂತ ಒಂದು ಮಗ್ಗುಲು ಬದಲಾವಣೆ ಎಲ್ಲರ ಜೀವನದಲ್ಲೂ ಇರುತ್ತೆ ಮತ್ತದು ಅನಿವಾರ್ಯ ಕೂಡ. ಒಂದರ್ದ ರಾತ್ರಿಯ ನಿದ್ದೆಯಲ್ಲೇ ಹತ್ತಾರು ಬಾರಿ ಮಗ್ಗುಲು ಬದಲಾಯಿಸುವ ನಾವು, ಒಂದೆಪ್ಪತ್ತು ವರ್ಷಗಳ ಜೀವನಕ್ಕಾಗಿ, ಜೀವನದಲ್ಲಿ ಮಗ್ಗುಲು ಬದಲಾಯಿಸಿದರೆ ಅದರಲ್ಲಿ ವಿಪರ್ಯಾಸವಿಲ್ಲ ಅಲ್ಲವೇ? ಒಂದಷ್ಟು ಹೊತ್ತಿನ ಒತ್ತುವಿಕೆಯ ನೋವಿಗಾಗಿಯಾದರು ಅದು ಬೇಕೆ ಬೇಕಲ್ಲ!!!

ಅದೇನೇ ಇರಲಿ. ಅಂತಹದೊಂದು ಬದಲಾವಣೆ, ಮುಂಜಾನೆಯ ಸೂರ್ಯ ಕಣ್ಣಿಗೆ ಚುಚ್ಚುವಾಗಿನ ಬೆನ್ನುಹಾಕುವಿಕೆಯಾಗಿರದೆ, ಹೊಸತನದ ಬೆಳಕ ನೋಡುವ ತವಕವಾಗಿರಲಿ.....




Friday, July 17, 2009

ನಿನ್ನ ಪ್ರೀತಿಯಲಿ.....(?!)

ರಮ್ಯನಿಸರ್ಗದ ಗುಪ್ತತೆಯಿರಲಿ,
ಸಪ್ತಸಾಗರಗಳ ಸುಪ್ತತೆಯಿರಲಿ,
ಭಾವಗಳಿಗೆಟಕದ ನಿರ್ಲಿಪ್ತತೆಯಿರಲಿ,
ಆದರೆ, ನಿರ್ಭಾವುಕಲಾಗದಿರು ಗೆಳತಿ.

ಪೂರ್ಣಚಂದಿರನ ಚೆಲುವಿರಲಿ,
ನಡುರಾತ್ರಿ ಆಗಸದ ಗೆಲುವಿರಲಿ,
ಅಲ್ಲೊಂದಷ್ಟು ತಾರೆಗಳ ಚಿತ್ತಾರವಿರಲಿ.
ಆದರೆ, ಸಿಡುಕಿ-ಗುಡುಗದಿರು ಗೆಳತಿ.

ಕಾನನದ ಕೋಗಿಲೆಯಿಂಚರದ ಇಂಪಿರಲಿ,
ಮುಂಜಾವ ತಂಗಾಳಿಯ ತಂಪಿರಲಿ,
ಹೊಸತನದ ನೈದಿಲೆಯ ಕಂಪಿರಲಿ,
ಆದರೆ, ಬಿರುಗಾಳಿಯಾಗದಿರು ಗೆಳತಿ.

ಗಿರಿಶಿಖರಗಳೆತ್ತರದ ಶ್ರೇಷ್ಟ್ಯವಿರಲಿ,
ಸಾಗರದ ರಸದಾಳದ ಇಷ್ಟವಿರಲಿ,
ರಸಭರಿತ ಭುವಿಯಂತ ಸಹನೆಯಿರಲಿ,
ಆದರೆ, ಸಿಹಿನೀರ ಒರತೆ ಬತ್ತಿಸದಿರು ಗೆಳತಿ.

ಹಳೆತನದ ಬೇರಿನ ಗಡುಸಿರಲಿ,
ಹೊಸತನದ ಚಿಗುರಿನ ಫಸಲಿರಲಿ,
ಬೆಳೆದ ಹೆಮ್ಮರದ ನೆರಳ-ಸೊಬಗಿರಲಿ,
ಆದರೆ, ಜಡಿಮಳೆಗೂ ಜರಿಯದಿರು ಗೆಳತಿ.

ತುಟಿಯಂಚಿನಲಿ ನಗು-ನಸುಗೆಂಪಗಿರಲಿ,
ಕಣ್ಣಂಚಿನಲಿ ಜಗದೊಲವೆಲ್ಲದರ ಮಂಪಿರಲಿ,
ಬದುಕು-ಭಾವದಲ್ಲೊಂದು ಚಿರ-ಹೊಳಪಿರಲಿ,
ಆದರೆ, ನಿನ್ನಲ್ಲೇ ನೀನು ಮತ್ಸರಿಸದಿರು ಗೆಳತಿ.

~: ೨೦-೦೬-೦೯ರಂದು ಮತ್ಸ್ಯಗಂಧ-ವೆಲ್ಲೋ ಸುರಂಗದೊಳಗೆ ನುಸುಳಿದಾಗ ಮೂಡಿದ ಮನದೆಸಳು.....

ಸುಮ್ನೆ ಇದ್ರ ಬಗ್ಗೆ....

ಸ್ನೇಹಿತರೇ,
೫-೬ blogಗಳನ್ನು ಒಟ್ಟಿಗೆ ತೆರೆಯಬೇಕೆಂಬ ಯೋಚನೆಯೊಂದು ಮೊಳೆತು ೩-೪ ತಿಂಗಳಾಯಿತು. ಆದರೇನು ಮಾಡಲಿ, Jobನ ಹುಡುಕಾಟ, interviewsನ ಪರದಾಟ, examನ ಹುಡುಗಾಟ, ಕೊನೆಗೊಮ್ಮೆ ಮುಂಬೈವರೆಗೊಂದು ಅಲೆದಾಟ ಇತ್ಯಾದಿಗಳ ತುರಾತುರಿಯಲ್ಲಿ blogನ ಉಸಾಬರಿಯಿಂದ ದೂರವಿರಬೇಕಾಯಿತು.

Simply ಒಂದು ಮಾತು!- Temporarily hack ಆಗಿದ್ದನ್ನು recover ಮಾಡಿದರೂ ಕೂಡಾ ಏನೂ ಬರೆಯಲಾಗಲಿಲ್ಲ. ಅದೇನೆ ಇರಲಿ, ಸದ್ಯಕ್ಕೆ ಈ ಒಂದು ಹೊಸ blog ತೆರೆದಿರುತ್ತೇನೆ..... ಅಂದ ಹಾಗೆ, ಅದೇಲ್ಲೋ live-link ಇದೆಯಂತೆ ಅಂತಿದ್ದೆ ಅಲ್ವಾ? ಅದು ಈಗ್ಲೂ ಇದ್ಯಾ-ಇಲ್ವಾ ಗೊತ್ತಿಲ್ಲ. Porn sitesನ್ನೆಲ್ಲ ಹುಡುಕೋ ತಾಳ್ಮೆಯಾಗ್ಲೀ, ಅಗತ್ಯವಾಗ್ಲೀ ನಂಗಿಲ್ಲ. ಅಂದಹಾಗೆ, ಬೆಲೆವೆಣ್ಣು ಕವನ ಅರ್ಧ-porn ಆಗುತ್ತಾ ನಂಗೊತ್ತಿಲ್ಲ. ಸಾಧ್ಯವಾದರೆ, ಬೆಲೆವೆಣ್ಣು-ಗೆ ಸಿಕ್ಕ commentsನ ಯಾವತ್ತಾದರೂ ನಿಂಜೊತೆ ಹಂಚ್ಕೋತೀನಿ. ಆದ್ರೆ, ಅಭಿಪ್ರಾಯ ಹೇಳಿದವರ ಹೆಸರು ಹೇಳಲಾರೆ.


ಹೊಸತನದಲ್ಲೇನು ಹೊಸತಿದೆ?-ಅಂದ್ರೆ...ಏನೂ ಇಲ್ಲ...ಸದ್ಯಕ್ಕೆ ಎಲ್ಲಾ ಹಳೇದೆ!!!

ಹೊಸತನವೇಕೆ?

ಸ್ನೇಹಿತರೇ,
Simply ಒಂದು ಮಾತಿನಲ್ಲಿ ಹಾಕುತ್ತಿದ್ದ ಬರಹಗಳೇ ೨-೩ ವರ್ಷಗಳಷ್ಟು ಹಳೆಯದು. ಕಳೆದೆರಡು ವರ್ಷಗಳ ಕಾಲ ಆಗೊಮ್ಮೆ-ಈಗೊಮ್ಮೆ ಎನ್ನುವಂತೆ ಏನೇನೋ ಹುಚ್ಚು ಗೀಚುವ ಗೀಳಿನಿಂದಲೂ, ಚೇಳುಕಚ್ಚಿದ ಮಂಗನಂತೆ ದೂರವುಳಿದಿದ್ದೆ. ಬರಹದಿಂದ ಪೂರ್ತಿ ಹೊರಗುಳಿದಿದ್ದೆ. ಭಾವನೆಗಳು ಬತ್ತಿಹೋದಂತಾಗಿದ್ದವು...... ಮತ್ತೇಕೋ ಬರೆಯುವಾಸೆ.... ಆದರೆ ಪದಗಳು ಸಿಗುತ್ತಿಲ್ಲ.... ಏನು ಬರೆಯಬೇಕೆಂದೂ ಗೊತ್ತಾಗುತ್ತಿಲ್ಲ... ಆದರೂ ಹೊಸತೇನೇನೋ ಬರೆಯುಂತಾಗಬೇಕೆಂದೇನೋ ಇದೆ. ಅಂತಹ ಕನಸಿನ ಕೂಸೇ ಈ 'ಹೊಸತನ'.
Just for change ಅಂತೀವಲ್ಲ...ಅದೇ ತರಹ, ಈ ಹೊಸತನ ಒಂದು ಹೊಸತನಕ್ಕಾಗಿ ಮಾತ್ರ....


ಕೂಸು ಹಸೆಯಲ್ಲೇ ಉಳಿಯುತ್ತಾ?
ಹೊಸತನದೆಡೆಗೆ ಹುರುಪಿಂದ ಬೆಳೆಯುತ್ತಾ??
..........................ಕಾಲ ನಿರ್ಧರಿಸುತ್ತೆ!!

Wednesday, July 15, 2009

ಬಯಕೆಗಳ ಮೀರಿ ಹಾರು......!!!

ಹಾರು ಹಕ್ಕಿಯೇ ಹಾರು ಬಾನೆತ್ತರಕೆ,
ಹಾರು, ಮುಗಿಲ ಮೇಲೇರಿ ಹಾರು,
ಹಿಂತಿರುಗಿ ನೋಡದಿರು, ಹಾರು ರವಿಯೆಡೆಗೆ,
ನಿನ್ನಾಸೆಗಳ ಗರಿಬಿಚ್ಚಿ, ಮನಮೆಚ್ಚಿ ಹಾರು,
ಆದರೂ...., ಗೂಡ ಮರೆಯಬೇಡ...!
ನೀನುಂಡ ಕಾಡ ಮರೆಯಬೇಡ.......!!
ನೀನಾಡಿದ ನಾಡ ಮರೆಯಬೇಡ.....!!!
ನೀಮಿಂದ ತೋಡ ಮರೆಯಬೇಡ....!!!!

ಹಾರು ಹಕ್ಕಿಯೇ ಹಾರು ದಿಗಂತದಾಚೆಗೆ,
ಹಾರು, ಗುಡ್ಡ-ಬೆಟ್ಟಗಳ ಮೀರಿ ಹಾರು,
ನೋವುಗಳೆಲ್ಲವ ಮರೆತು ಹಾರು, ಕಡಲದಾಟಿ,
ಮಧುರಭಾವನೆಗಳ ಮಾತ್ರ, ಹೃದಯಮೀಟಿ,
ಆದರೂ...... ನಿನ್ನವರ ಮರೆಯಬೇಡ...!
ತುತ್ತನಿತ್ತವರ ಮರೆಯಬೇಡ...............!!
ನಿನ್ನ ನೋವಿಗತ್ತವರ ಮರೆಯಬೇಡ.....!!!
ನಿನ್ನ ಹೊತ್ತವಳ, ಹೆತ್ತವರ ಮರೆಯಬೇಡ!!!!

ನೀನಿಂದು ಉಬ್ಬಿರಬಹುದು, ಕೊಬ್ಬಿರಬಹುದು,
ಹೊಸಲೋಕದೊಳಗೊಬ್ಬನಾಗಿ ಉಳಿಯಬಹುದು,
ಆದರೂ ಮರೆಯದಿರು-ನೀನಲ್ಲಿ "ಪರಕೀಯ".....!
ಹೊಸಲೋಕದಲ್ಲೆಂದೂ ನೀನು "ಹೊಸಬ"......!!
ಮುಂದೊಮ್ಮೆ ಮನಬಿಚ್ಚಿ ಹಾರಬಹುದು,
ಈ ಭುವಿಯೆಡೆಗೆ, ದಿಗಂತದೀಚೆಗೆ,
ಅದಕ್ಕಾದರೂ ಈ ಗೂಡ ಮರೆಯದಿರು,
ಈ ಕಾಡು, ಗೂಡು ನಿನಗಾಗಿ ಕಾಯುವುದು!!

~:ಇದು
ಮನೆ ಬಿಟ್ಟು ದೇಶ ಬಿಟ್ಟು, ಕೊನೆಗೆ ಕಲಿತ ಮೂಲ ವಿಧ್ಯೆಯನ್ನೂ ಬಿಟ್ಟು ಸುಮ್ನೆ ಜೀವಿಸುತ್ತೇವೆ ಅನ್ನೋ ಮನೋಭಾವದವರಿಗಾಗಿ.....

ಯಾರವಳು....??

ನೆನೆಪಿಸದೆಯೂ ನೆನಪೆದೆಯಲ್ಲಿ ಮೊನಚಾಗಿ ತಿವಿವವಳು?
ನನ್ನ ಜೀವದ ಸವಿಯೆಲ್ಲವ, ನನ್ನದಲ್ಲ-ವೆಂಬಂತೆ ಹೀರಿದವಳು....
ರಸಕಬ್ಬಿನ ಜೀವರಸವೆಲ್ಲವ ಹೀರಿ, ತೊಗಟೆ ಎಂಬಂತೆ ಎಸೆದವಳು
ನೆನೆಗುದಿಗೆ ಬೀಳಿಸಿದರೂ, ನೆನಪಲ್ಲಿ ಮೊದಲಿಗಲಾಗುವವಳು....
ಅವಳಿದ್ದರೆ, ಕಣ್ಣಲ್ಲಿ ಪನ್ನೀರು ಬರುವುದಾದರೂ ಎಂತು?!!!!

ಒಂದೊಮ್ಮೆ ನೆನಪಿಗೇ ಬತ್ತಿಯಾಗಿ,
ಮುಂದೊಮ್ಮೆ ನೆನಪನ್ನೇ ಬತ್ತಿಸಿದವಳು,
ಅಂದು ಮನವನ್ನೇ ಮೌನದ ಬುತ್ತಿಯಾಗಿಸಿ,
ಇಂದು ಮ್ಲಾನದ ತೊಟ್ಟಿಯಾಗಿಸಿದವಳು.

ಬೆಳಕಿಗೇ ಬೆಳಕ ಕಣವಾಗಬೇಕೆಂದಿದ್ದವಳು,
ಇಂದು ಗಾಡ-ಮೌಡ್ಯದ ಮುಸುಕಾಗಿರುವವಳು,
ಬೆಳಕಾಗಿ, ಬೆಳಕನ್ನೇ ಹಿಸುಕಿ-ಹೊಸಕಿದವಳು..?!

ಮನಸ ಗೆದ್ದವಳು, ಕನಸ ಕದ್ದವಳು, ಮೆದುಳ ಮೆದ್ದವಳು,
ಮನಸಿಂದ 'ಮುನಿಸಿ' ಹೊರಬಿದ್ದವಳು,
ಮನಸ್ಸಲ್ಲೇ ಮುದ್ದಿಸಿ, ಎದ್ದುಹೋದವಳು...
ಕನಸಲ್ಲೇ ಕನಸಂತೆ ಕರಗಿಹೋದವಳು,
ಮೆದುಳಿಂದ ಮೆದುವಾಗೇ ಸರಿಯುತ್ತಿರುವವಳು..... (?!)

ಯಾರವಳು...........? ಅವಳು ಅವಳೇ ಏನು....?!


~: ಮೊದಲ ಭಾಗ ಗೆಳತಿಯೋರ್ವೆಯ scrapನಿಂದ ಪ್ರೇರಿತ.
cyberನ ಅವಸರದಲ್ಲಿ ನೇರವಾಗಿ ಗೀಚಿದ್ದು,
ಮುಂದಿನವು....ನೇತ್ರಾವತಿ ಸೇತುವೆ ಮೇಲೆ ಮೂಡಿದ್ದು....

Monday, June 1, 2009

ಇಲ್ಲೇಕೆ ಬಂದೆ ಎಂದರೆ....

ಸ್ನೇಹಿತರೇ, ಇತ್ತೀಚೆಗೆ ನನ್ನ ಓರ್ಕುಟ್ ಖಾತೆಗೆ ಒಂದು ಕೆಟ್ಟದಾಗಿ ಒಂದು live link ಕೊಟ್ಟಿದ್ದ ಹಾಗೆ, ಸಿಂಪ್ಲಿ ಒಂದು ಮಾತಿಗೂ ಒಂದು link ಒಂದು porn siteನಲ್ಲಿದೆಯಂತೆ, ಹಾಗೆಂದು ಸದ್ಯಕ್ಕೆ ಅದನ್ನ delete ಮಾಡುವ ಇರಾದೆ ನನಗಿಲ್ಲ. ಆದರೆ ಯಾವುದೇ ಕ್ಷಣದಲ್ಲಿ ನಾನದನ್ನು delete ಮಾಡಬಲ್ಲೆ. ಆದುದರಿಂದ ಈ ಹೊಸ blog ಖಾತೆಯನ್ನು ತೆರೆದಿರುತ್ತೇನೆ.
ಇತರರು ನಮಗೇನು ಮಾಡುತ್ತಾರೆ ಅನ್ನುವುದು ಅವರ attitudeನ್ನ ತೋರಿಸುವುದುದಲ್ಲವೇ..?!
ಹಾಗೇ ಅವರನ್ನು ಕ್ಷಮಿಸುವುದಕ್ಕೆ ಕ್ಷಮೆಯಿಲ್ಲದಿದ್ದರೂ, ತಾಳ್ಮೆಯಿರಬೇಕಲ್ಲವೇ..?

ಏನೇ ಆಗಲಿ ಹೊಸತನದಲ್ಲಿ ನನಗೆ ಖುಷಿಯಿದೆ.
ಹೊಸತಿನ ಹೊಸತನ ಇಲ್ಲಿ ಮುಂದುವರಿಯಬಹುದೇನೋ ಎಂಬ ಆಸೆಯೊಂದಿಗೆ.....

ನಿಮ್ಮ ರತ್ನಾಕರ್...

Friday, May 29, 2009

Simply ಒಂದು ಮಾತು ೫

ಇವ್ರಾ ನಿಮ್ಮ Best friends....?

       ಎಲ್ರಿಗೂ Close friends ಅನ್ನಿಸ್ಕೊಂಡೋರು ಇದ್ದೇ ಇರ್ತಾರೆ ಕಣ್ರೀ...ಅಂಥೋರು ನಮ್ದು ಆ ಥರದ ಸ್ನೇಹ... ಈ ಥರದ ಗೆಳೆತನ-ಅಂಥ ಕೊಚ್ಕೋತ ಇರ್ತಾರೆ. ಆದ್ರೆ ನಿಮ್ಗೊಂದು Problem ಬಂದ್ರೆ ಒಂದ್ಸಲಾ ತಿರುಗಿ ನೋಡಿದ್ರೆ-ಇವ್ರಲ್ಲಿ ಎಷ್ಟೋ ಜನ ಇರೋದೇ ಇಲ್ಲ...ಅಲ್ವೇನ್ರೀ..?? ಅಲ್ಲೇ ನೀವು ಎಡವಿರೋದು...ನೀವು ಯಾಕ್ರೀ ತಿರುಗಿ ನೋಡ್ಬೇಕು? Real friends ಆಗಿರ್ತಿದ್ದ್ರೆ..... ನೀವು ನೋಡೋದಕ್ಕೆ ಮುಂಚೇನೆ-ಅವ್ರೇ ಮುಂದೆ ಬಂದಿರೋದು ಅಲ್ವೇನ್ರೀ? ನೋಡೋದಕ್ಕೆ ಮುಂಚೇನೇ ಕಾಣಿಸ್ಕೊಂಡು ಬಿಡಿದ್ದ್ರಲ್ವಾ??!

Life ಅಂದ ಮೇಲೆ ಎಷ್ಟೋ ಸಲ ನಾವು ತುಂಬಾ Hurt ಆಗೋ ತರ ಇರೋ Situationsನ Face ಮಾಡ್ಲೇ ಬೇಕಾಗುತ್ತೆ ಅಲ್ವಾ?... Problems ಬಂದೇ ಬರುತ್ತೆ ಅಲ್ವಾ? ಅದೂ Unexpected ಆಗಿ..ಇದು ಒಂಥರಾ Thrill ಅನ್ನಿ...ಆದ್ರೆ ಆ Thrillನ Enjoy ಮಾಡೋ ಮೊದ್ಲು ಕೆಲವೊಮ್ಮೆ ನಾವು ತುಂಬಾ Feel ಮಾಡ್ಕೋತೀವಲ್ಲ...ಆಗ್ಲೇ..ನಮ್ಗಲ್ಲ-But ನಮ್ಮ ಮನಸ್ಸಿಗೆ ಅನ್ಸೋದು... "ಛೆ! ಈಗ ಇರ್ಬೇಕಿತ್ತು... ಆ ನನ್ನ friend... ಒಂದು solution ಅಥವಾ suggetion ಕೊಡ್ತಿದ್ನೋ ಏನೋ... ಛೆ! Atleast ಒಂದು ಇಷ್ಟು concern ಆದ್ರೂ...!! ಸುಮ್ನೆ ನಮ್ಮ Feelings ಹೇಳ್ಕೊಂಡು ಅತ್ಬಿಡೋಬಹುದಿತ್ತು..." ಅಂಥ... ಆದ್ರೆ ಅವ್ರು ಸಿಗೋದೇ ಇಲ್ಲ... ಅಲ್ವೇನ್ರೀ?!!... ಸಿಗೋ ಹಾಗಿದ್ರೂ-Busy ಅಂತಾರೆ ಅಲ್ವಾ? Busy ಅಲ್ದಿದ್ದ್ರೂ....ಹೇಗಾದ್ರೂ meet ಆದ್ರೂ.. ನಿಮ್ಮ Problems ಕೇಳೋಕೆ, ಅವ್ರಿಗೆ Patience ಇರೋದಿಲ್ಲ... ಅಲ್ವಾ? 'Co-incedence ಕಣೋ... ನಂಗೂ ಒಂದು...Problem ಕಣೋ... "-ಅಂತಾರೆ...!!!
 
       ಕೆಲವೊಮ್ಮೆ ನಿಮ್ದೆಲ್ಲ problems solve ಆದ್ಮೇಲೆ ಬಂದು-ನಿಮ್ಮ ಪಕ್ಕದಲ್ಲಿ ಕೂರ್ತಾರೆ...Sholder ಮೇಲೆ ಕೈಹಾಕಿ...ನಿಮ್ಮ Story ಕೇಳಿ, Sorry ಹೇಳಿ ಅಥವಾ ನಿಮ್ಮ tragidy ಕೇಳಿ...Sympathy ತೋ‍ರ್‍ಸಿ... "ಛೆ!ಛೆ!.. ಅಂಥಾರೆ..ನಂಗ್ಯಾಕೋ ಹೇಳ್ಳಿಲ್ಲ...Stupid.."- ಅಂಥಾರೆ..ಅಲ್ವಾ? ನಿಮ್ಮ feelingsನ enjoy ಮಾಡ್ತಾರೆ ಅಲ್ವಾ?... ನಿಮ್ಗೆ ಬೇಕಾಗಿರೋದು  belated sympathy ಅಲ್ಲ... in time concern ಎಂಬೋದು ಅವರಿಗೆ ಅರ್ಥಾನೆ ಆಗಿರೋದಿಲ್ಲ, ಅಲ್ವೇನ್ರಿ?
 
       ನಿಮ್ಗೆ ತುಂಬಾ secret ಆಗಿಡ್ಬೇಕಾದ things ಅಥವಾ matters ಇರುತ್ತೆ ನೋಡಿ.. ಅದನ್ನು Share ಮಾಡೋವಾಗ ನಿಮ್ಗೆ ಈ "Best Friends"ನ ಎಡೇಲಿ Faithful ಆಗಿರೋರ್ನ ಹುಡುಕೋದೂಂದ್ರೆ ಸ್ವಲ್ಪ tough ಅಲ್ವೇನ್ರಿ..!!? ಎಷ್ಟೋ ಸಲ.. ಅಲ್ಲೇ ನೀವು ಎಡವೋದು...ಯಾರೂ ಸಿಗದಾಗ...ಸಿಗೋದಿಲ್ಲ ಅನ್ಸೋವಾಗ..ಸುಮ್ನೆ ಹೇಳಿ ಬಿಡ್ತೀನಿ ಅನ್ನೊ Risk ತಗೊಂಡಿರ್ತೀರ...ಮತ್ತೆ... 'It was a wrong decision '-ಅನ್ಸುತ್ತೆ ಅಲ್ವೇ....ಕೆಲವೊಮ್ಮೆ..??!!
 
   ಇಂಥ situationನಲ್ಲಿ...ನಿಮ್ಗೊಮ್ಮೆ...ತೀರಾ ಬೇಡವಾಗಿದ್ದೋರು...'ನಾನು Hate ಮಾಡ್ತಿದ್ದೇನೆ' ಅಂಥ ತಿಳ್ಕೊಂಡಿದ್ದೋರು...'ನನ್ನ Hate ಮಾಡ್ತಿದ್ದಾನೆ'.... ಅಂಥ ತಿಳ್ಕೊಂಡಿದ್ದೋರು...Helpಗೆ ಬರೋದಿದೆ.... ಅಲ್ವಾ?...For the life time-ಅವ್ರು Best friends ಅನಿಸ್ತಾರೆ..ಅಲ್ವಾ? ಅದೇ ಕಣ್ರೀ reality...fact ಅಂದ್ರೆ....

       ನೀವು Best friends ಅಂದ್ಕೊಂಡಿರೊರೆಲ್ಲ Best friends ಆಗೋದಿಲ್ಲ,..ಆಗಿರೋದಿಲ್ಲ. Best friends ಆಗಿರೋರು ತೋರಿಕೆಗೆ ಕಾಣಿಸ್ಕೋಳ್ಳೋದೂ ಇಲ್ಲ.....

~Nov 06

Simply ಒಂದು ಮಾತು-೯

 About a Novel....

    ಇದು simply ಒಂದು ಮಾತಲ್ಲ ಕಣ್ರೀ... ಯಾಕಂದ್ರೆ ಅದು simply ಒಂದು Book ಅಲ್ಲ... ಅದು simple ಆಗಿರೋ ಒಂದು great book... ಅಲ್ಲೇ ಇರೋದು ಅದರ speciality... ಅದೇನೂ ದಪ್ಪ ಇಲ್ಲ.... ಅಲ್ಲಿನ language ಕೂಡಾ tough ಅಲ್ಲ....ಎಲ್ಲಾ vacabulary ತಡವಿದರೇನೇ ಸಿಗುವ words ಅಷ್ಟೇ... ನಿಮಗೆ ಇಲ್ಲಿ ಬೇಕಾಗಿರೋದು 'ನಿದಾನವಾಗಿ ಓದೋ Mentality ಅಷ್ಟೇ... ಹಾಗಂತ Patience ತಂದ್ಕೋಬೇಕಾಗಿಲ್ಲ...ಅದೇ ಓದಿಸ್ಕೊಂಡು ಹೋಗುತ್ತೆ. ನೀವದನ್ನ ತೆರೆದರೆ..ಹತ್ತಾರು ಗೆರೆ ಓದಿದ್ರೆ... Book ಮುಚ್ಚೋದು ಬಿಡಿ-Eyelids ಕೂಡಾ ಮುಚ್ಚೋದಿಲ್ಲ... ಹಾಗಾದ್ರೆ Love Storyನೇ ಇರ್ಬೇಕು ಅಥವಾ Crime Story ಅಂದ್ಕೊಂಡ್ರಾ... ಅಥವಾ Detective...? ಒಂದೇ ಮಾತ್ನಲ್ಲಿ ಹೇಳ್ಬೇಕೂಂದ್ರೆ-"ಯಾವ್ದೂ ಅಲ್ಲ ಅಥವಾ ಎಲ್ಲಾನೂ ಕೂಡಾ...!!!".

ಅದೊಂತರಾ... 'All in One Book'... ಅಲ್ಲೊಂದಷ್ಟು Science ಇದೆ. ಒಂದಷ್ಟು ಗ್ರಹಗಳ ಬಗ್ಗೆ-ಗ್ರಹವೀಕ್ಷಣೆ ಬಗ್ಗೆ...Mental and Manual Calculations.. Ways of thinking...Innovative Inventions ಇದೆ-ಅದಕ್ಕೇ ಅದೊಂತರಾ Detective Storyನೇ.. ಈ Book ಇಡೀ ವಿಶ್ವಾನೆ ತಂದು ನಿಮ್ಮ ಕೈಲಿಡುತ್ತೆ... ಗುಡಿಸಲಿಂದ..ಹಳ್ಳಿಗೆ...ಅಲ್ಲಿಂದ ದಿಲ್ಲಿಗೆ ನಿಮ್ಮನ್ನ ನಡೆಸಿ, ಲಂಡನ್‍ಗೆ..ಸಾನ್‍ಪ್ರಾನ್ಸಿಸ್ಕೋಗೆ..ರಷ್ಯಾಕ್ಕೆ...ಚಂದ್ರನವರೇಗೂ ಮುಟ್ಟಿಸುತ್ತೆ..ಮನಮುಟ್ಟುತ್ತೆ..ಮನಸ್ಸು ಬಿಚ್ಚಿಸುತ್ತೆ...ಮೆದುಳು ಮೇಯಿಸುತ್ತೆ...ಬೆಚ್ಚಿ ಬೀಳಿಸುತ್ತೆ ಕೂಡಾ..!!?

ಇಲ್ಲಿ ಅವಿಧ್ಯಾವಂತ ಹಳ್ಳಿಗರನ್ನ ವಂಚಿಸುವ ಒಡೆಯರ ಕಥೆಯಿದೆ...ಜೀವಭಯದಿಂದ ತತ್ತರಿಸಿದವರ-ದುಃಖ ಒತ್ತರಿಸುವ ವ್ಯಥೆಯಿದೆ...ಆಸ್ತಿಕತೆಯನ್ನೇ ಬಂಡವಾಳವಾಗಿಸಿದವರ ಚಿತ್ರಣವಿದೆ....'ಪ್ರಳಯ'-ತಾಂಡವವಾಡುವಾಗಲೂ ಅದರೆಡೆಯೆಲ್ಲಿ ತಮ್ಮ ಬೇಳೆ ಬೇಯಿಸುವ ಪ್ರಚಂಡ-ರಾಜಕಾರಿಣಿಗಳಿದ್ದಾರೆ...ಬಡತನದಲ್ಲಿ ನಡುಗಿ ನಲುಗಿದವರಿದ್ದಾರೆ....ನಿರುದ್ಯೋಗಿಯ ವೇದನೆಯಿದೆ...ಅಧಿಕಾರಿಗಳ ಧರ್ಪವಿದೆ..ನಾಟಕೀಯ Interviewನ ಅಳಿಯದೆ ಉಳಿಯಬಲ್ಲ ಚಿತ್ರಣವಿದೆ...ಸಂಸಾರದ ಭಾರ ಹೊತ್ತ ಹೆಣ್ಣಿನ ಕಥೆಯಿದೆ...."ಬದುಕುವ ಪ್ರಶ್ನೆ ಬರುವಾಗೆ ಆಕೆಗಿಂತಲೂ ಗಂಡಿಗೇ ಆಧ್ಯತೆ" ಎಂಬ ಒಪ್ಪಬಾರದ ನಿತ್ಯಸತ್ಯವಿದೆ.

ಪ್ರಳಯದಿಂದ ಬಚವಾಗಲು ಒಂದಿಷ್ಟು ಪ್ರದೇಶಕ್ಕೆ ಕಿತ್ತಾಡಿ ಪ್ರಳಯವನ್ನೇ ನಿರ್ಮಿಸ ಹೊರಟ ಒರಟ ವಿಶ್ವರಾಷ್ಟ್ರಗಳಿವೆ. ಸಾಯುವಾಗ ಎಲ್ಲವನ್ನೂ ಅನುಭವಿಸಿ ಬಿಡುತ್ತೇವೆ ಎಂಬ attitudeನವರಿದ್ದಾರೆ....ಪ್ರಾಣಬೀತಿಯ Mentalityಯ ಚಿತ್ರಣವಿದೆ....."ಸಾಯುವ ಸಮಯ ಯಾಕೆ ಪೂರ್ವನಿಗದಿಯಾಗಿಲ್ಲ? ಆದರೇನಾದೀತು?-ಎನ್ನುವುದಕ್ಕೆ ಇಲ್ಲಿದೆ ಉತ್ತರ. ಇಲ್ಲಿ ಸಾಯುವವರೇಗೂ ಬದುಕಲು ಓಡುವವನೊಂದೆಡೆಯಾದರೆ...ಮರುದಿನ ಸಾಯುವ ಮುದುಕನಿಗೋಸ್ಕರ ಪ್ರಾಣಬಿಡುವ ಯುವಕನಿನ್ನೊಂದೆಡೆ. Love Story- ಅಂದ್ನಲ್ಲ...ಹೌದು! ಅದೊಂದು ನಿರ್ಮಲ Love Story ಕೂಡಾ!! ಸಂಸ್ಕ್ರತಿಯನ್ನು ಮೀರಿ Enjoy ಮಾಡುವವರಲ್ಲ ಇಲ್ಲಿನ LOVEಗಳು- I mean ಪ್ರೇಮಿಗಳು. ಅವರು ಮನದ ಮನದಾಳದಿಂದ ಪ್ರೀತಿಸುವವರು....ಸಾವ ಕೊನೆಹಂತದಲ್ಲೂ....ಭೂಮಿಯ ಮಡಿಲಾಳದ...ಆ ಏಕಾಂತದಲ್ಲೂ-ಒಬ್ಬರನ್ನೊಬ್ಬರು.. Permission ತಗೊಂಡು Touch ಮಾಡುವವರು...!! ಅದೇ ಇಲ್ಲಿನ Specialityರೀ....

ಎಲ್ಲಾ Provisions ಇದ್ದೂ...ಯುಗಾಂತವನ್ನು ಕಂಡೂ ಕಾಣದಂತೆ ಕುಳಿತ... Observatoryಗಳನ್ನೆಲ್ಲ ಮುಚ್ಚಿ-ಕೈಚೆಲ್ಲಿ ಕುಳಿತ ವಿಶ್ವವಿಜ್ಞಾನಿಗಳೊಂದೆಡೆಯಾದರೆ...ಕೇವಲ ಒಂದು Telescopeನಿಂದ ಬ್ರಹ್ಮರಹಸ್ಯವನ್ನು ಭೇಧಿಸಿ...Descover ಮಾಡಿ....ಬರೇ Mental Calculationsನಿಂದ....Seconds ಕೂಡಾ ತಪ್ಪಿಲ್ಲದೆ-Accurate ಆಗಿ ಯುಗಾಂತವನ್ನು ಮನಗಂಡ Indian Professor ಇನ್ನೊಂದೆಡೆ!! ಯುಗಾಂತಕ್ಕೆ ಕ್ಷಣಗಣನೆ ಮಾಡುವವರು ಅತ್ತಕಡೆಯಾದರೆ,.. ತಮ್ಮ ಬೇಳೆ ಬೇಯಿಸುವ, ಕಚ್ಚಾಡುವವರೊಂದೆಡೆಯಾದರೆ,..ಇದರೆ ಪರಿವೆಯೇ ಇಲ್ಲದವರು ಮತ್ತೊಂದೆಡೆಯಾದರೆ,-60ರ ಹರೆಯದ ಮುದುಕನೊಬ್ಬ, ಇತ್ತ ಕಡೆ 'ಯುಗಾಂತಕ್ಕೊಂದು ಅಂತ್ಯ' ಹುಡುಕುವುದರಲ್ಲಿ ಮಗ್ನನಾಗುತ್ತಾನೆ!! ವಿಶ್ವ ಕೈಕಟ್ಟಿ ಕುಳಿತಾಗ-ಈತ ವಿಶ್ವ ರಕ್ಷಣೆಗೆ ಸೊಂಟಕಟ್ಟಿ ನಿಲ್ಲುತ್ತಾನೆ...ಜೀವಸಂಕುಲದ ರಕ್ಷಣೆಯ ಪಣತೊಡುತ್ತಾನೆ..ಅಸಂಭವವಾದ ಕಾರ್ಯಕ್ಕೆ ಕೈ ಹಾಕುತ್ತಾನೆ!! ಕೊನೆಗೂ... "Eureka..!!!" -'Yes!..Oxigen atoms..Ozone...Magnetic Field...'- ಮುದುಕನಿಗೆ ಸಾಧಿಸಿದ ಸಂತೋಷ... ಆಹಾ! ತನ್ನ ಕನಸು.. 'Nobel Prize!!'..?.. " ಛೆ! ಅಲ್ಲ.. ವಿಶ್ವಮಾನವಕುಲವನ್ನು ರಕ್ಷಿಸಿದ ಸಂತೋಷ " 'Eureka' ಎಂದು ಕೀರಿಟ್ಟ... ಶಬ್ದ ಮಾತ್ರ ಹೊರಬಂತು... ಆತ  Laboratoryಯಿಂದ ಹೊರಬರಲಾರದೇ ಹೋದ..... ಯುಗಾಂತವಾಯಿತು.....!!!

ಅದೊಂದು ಯುಗಾಂತ...ಜನರ ಅನ್ಯಾಯಗಳಿಗೊಂದು ಅಂತ್ಯ...ಅನಾಚಾರ...ಅತ್ಯಾಚಾರ..ಅನಾಗರೀಕತೆಗಳಿಗೊಂದು ಅಂತ್ಯ...ಅಸಮಾನತೆಗೆ, ಹೊಲಸು ರಾಜಕಾರಣಕ್ಕೊಂದು ಅಂತ್ಯ....ಶಸ್ತ್ರಭಂಢಾರಕ್ಕೊಂದು ಅಂತ್ಯ... ದಣಿದವರನ್ನು ಮಣಿಸುವ ಧನಿಗಳಿಗೆ, ಧನಿಕರೆಡೆಯಲ್ಲಿ ಬತ್ತಿಹೋದ ಬಡ ನೋವಿನ ದ್ವನಿಗೆ ಒಂದು ಅಂತ್ಯ... ಗಂಡು-ಹೆಣ್ಣೆಂದು ಬೇಸತ್ತ ಹೆಣ್ಣೋರ್ವಳ ಕೂಗಿಗೆ-ಭಗವಂತನ ಓಗೊಡುವಿಕೆ-ಈ ಯುಗಾಂತ...ಹೊಸತೊಂದು ಯುಗಬರಲೆಂಬ ಅಕೆಯ ಆಸೆಗೆ ಆಸರೆ- ಈ ಯುಗಾಂತ!!!

Oh! Yes! ಆ Book ಯಾವುದೂಂತ ಹೇಳ್ಲೇ ಇಲ್ವಲ್ಲ.... "ನಕ್ಷತ್ರ ಜಾರಿದಾಗ..." ಅಂತ.. ಇದರ ಮೂಲ Yugantam ಅಂತ, ಯಂಡಮೂರಿ ವೀರೇಂದ್ರನಾಥ್ ಬರೆದಿರೋದು.... ಕನ್ನಡಕ್ಕೆ ಅನುವಾದಿಸಿದವರು-ರವಿ ಬೆಳಗೆರೆ.

ಅದಕ್ಕೇ! ಇದು Simply ಒಂದು Book ಅಲ್ಲ.... ಆ Book ಈ ವಿಶ್ವದಲ್ಲಿ ಇದೆ ಅನ್ಸೋದೇ ಇಲ್ಲ...ವಿಶ್ವಕ್ಕೆ-ಯುಗಾಂತವಾಗಿದೆಯಲ್ಲ.....!!? ಅದಕ್ಕೇ...ಇಡೀ ವಿಶ್ವಾನೇ ಆ  Bookನಲ್ಲಿ ಇದೆ!!!

~Feb 2007

Tuesday, May 5, 2009

Simply ಒಂದು ಮಾತು-೧

Reasonable Friendship........

ಕೆಲವರೆನ್ನುತ್ತಾರೆ ಕಣ್ರೀ...friendship ಅಂದ್ರೆ, ಅದಕ್ಕೆ Reason ಬೇಕಿಲ್ಲ, ಸುಮ್ನೆ ನನ್ನ-ನಿನ್ನ ತರ ಇರೋ ಇಬ್ರು ಮಾತ್ರ ಬೇಕಿರೋದಂತ...ಕೇಳೋಕೆ ಚೆನ್ನಾಗಿದೆಯಲ್ವಾ? ಹಾಗೊಂದು sms ಬಂದ್ರೆ great ಅನ್ನಿಸೋದಿಲ್ವೇ?... ನೀವು think ಮಾಡಿದ್ದೀರಾ-Reason ಇಲ್ದೆ ಯಾವುದೇ Action ಅಥವಾ Reaction ನಡೆಯೋದಿಲ್ಲವೆಂದು.......??!!

ಸುಮ್ನೆ ಕಣ್ರೀ....ಎಲ್ಲದಕ್ಕೂ Reason ಬೇಕೇ ಬೇಕು...!! ಜತೆಗೊಂದು Media ಕೂಡಾ!!! ಸುಮ್ನೆ ನೋಡಿ....ಯಾರಾದರೂ friends ಆಗ್ತಾರಾ....? ಹಾಗಾದರೆ ಎಲ್ರೂ friends ಯಾಕಾಗಿಲ್ಲ?ಯಾಕಾಗಲ್ಲ? Reason ಜೊತೆಯಲ್ಲಿ Condition ಕೂಡಾ ಇದೆಯಲ್ಲ್ರೀ..??!

ನೀವೊಂದೇ Ageನವರಲ್ಲದಿರುತ್ತಿದ್ರೆ....Collegeನಲ್ಲಿರದಿರುತ್ತಿದ್ರೆ....ಒಂದೇ Benchನಲ್ಲಿರದಿರುತ್ತಿದ್ರೆ... Busನಲ್ಲಿ ಬರುತ್ತಿರಲಿಲ್ಲಾಂದ್ರೆ....orkutನಲ್ಲಿರದಿರುತ್ತಿದ್ರೆ...ನಿಮ್ಮ Thoughts ಎಂದೂ Meet ಆಗದೇ ಇರುತ್ತಿದ್ದರೆ.... Atlast ನೀವೇ Meet ಆಗದಿರುತ್ತಿದ್ದರೆ....ಈ ನಿಮ್ಮ Friends ಸಿಗುತ್ತಿದ್ರಾ...? ಇದೇ Friends ಸಿಗುತ್ತಿದ್ರಾ..?? ಈಗ ಹೇಳಿ Reason ಬೇಡ್ವಾ...? Media ಬೇಡ್ವಾ...?? ಬದುಕಿನ ತಿರುವಲ್ಲೊಮ್ಮೆ, ನಾವು ಮರುಗುವಾಗ, ನೆರವಾಗುವವರಲ್ಲವೇ-Friends...?! ನೋಡಿ.. ಆ ತಿರುವೊಂದು Media ತಾನೇ? ಅದು ಹಾಗೆಯೇ- ಸ್ನೇಹ ಮೂಡಲು Reason ಬೇಕು, ಬೆಳೆಯಲು Media ಬೇಕು. ಈ ಪ್ರತಿಭಾತರಂಗವೂ ಒಂದು Media ಅಥವಾ ವೇದಿಕೆಯಾಗಬಲ್ಲುದು...!!

ಕೆಲವರೆನ್ನುವುದು ನೋಡಿದ್ದೀರಾ....- “I love you for what you are..” ಅಂಥ.. ಅದು ಕಣ್ರೀ ಮಾತೂಂದ್ರೆ. ನಿಜ ಹೇಳ್ತಿದ್ದಾರೆ. “Reasonable Reason” ಕೊಡ್ತಿದ್ದಾರೆ! ಅವರು ಹಾಗೆ ಇರದಿರುತ್ತಿದ್ದರೆ...? ಇರುತ್ತಿತ್ತೆ ಆ ಸ್ನೇಹ? ಮೂಡುತ್ತಿತ್ತೇ- ಆ ಪ್ರೀತಿ...??

ಯಾವುದೇ Friendshipಗಳು ಸುಮ್ನೆ ಮೂಡಲ್ಲ. ಸುಮ್ನೆ ಮೂಡಿದವು Friendshipಗಳೇ ಅಲ್ಲ....

~Sept 2006

Friday, April 24, 2009

ಆನಿ ನಮ್ಮ ಭಾರತೋ... ( ತುಳು )

ಆನಿ ಬತ್ತಿತ್ತೆರ್ ಭಾರತಗ್,
ಪರದೇಶಿಗುಲು ಈ ಜಾಗೆಗ್,
ಒರ ದೇಶದ ಮಾನ ದೆಪ್ಪೆರೆಗ್,
ಬರಗಾಲದಲೆಕ್ಕಾಂಡ್ ಜನಕುಲೆಗ್

ಅಕ್‍ಲೆ ಕೈಟಿತ್ತ್ಂಡ್ ಪರಾ ಗುಂಡು,
ಅಬ್ಬಾ! ಅವು ಪುಡಾನಗ ವಾ ಒಂಜಿ ಸೌಂಡು,
ನಮ್ಮಕುಲು ಬಲಿತೆರ್ ಪುಂಡು-ಪುಂಡು,

ಅಕುಲೆ ಕೈಟಿತ್ತ್ಂಡ್ ಬೋಡಾಯಿ-ಫೌಂಡು

ನಮ ನೆನೆತ-'ಅಕುಲು ನಮಕೊಂಜಿ ವರ',
ಇಜ್ಜಿಂದಾಂಡ ತಿಕ್ಕುವಾ ವಿಮಾನ ತೂಯೆರ?
ರೈಲ್, ಕಾಕಜಿದ-ವಿಧ್ಯೆದ ಸರೋವರ,
ಅಕುಲಿತ್ತ್ಂಡ, ನಮಕ್ ಬರಂದ್ ಬರ

ಅಕುಲಾನಿ ನಮ್ಮ ಸಂಪತ್ತ್'ನ್ ತೂಯೆರ್,
ನಮ್ಮ "ನಂಬಿಕೆದ ಜಾಗೆ"ನ್ ನಾಡಿಯೆರ್,
ನಮನ್ "ಮಸೀದಿ-ದೇವೆರ್ಂದ್" ಪುಡತೆರ್,
ನಮ್ಮ ಪೇರ್‌ಡ್ ನಮಕೇ ಕೊಡತೆರ್

ನಮ ಉದಾರಿಗುಲು ತೂಲೆ,
ಅಂಚಾದೆ-ಸುದಾರಿದ್‍ಜ ತೆರಿಲೆ,
ಕಟ್ಟೊಡಾವು ಉದಾಸೀನಗ್ ನಮ ಬಿಲೆ,
ನಾಯಿಲಾ ಸೀದಾ ಬರು ನೆನೆಪು ದೀಲೆ

ಆನಿ ಮಹಾತ್ಮೆರಿತ್ತೆರ್ ತೋಜಾಯೆರೆ ಶಕ್ತಿ,
ಆರ್ ದೈವಾತ್ಮೆರಾಯೆರ್ ಕಲ್ಪಾದ್ ಯುಕ್ತಿ,
ಆಂಡಲಾ ದಿವಾಳಿ ಆಯಿಜೆರಾ ಕೊರ್ಪಾದ್ ಮುಕ್ತಿ,
ಆರ್ ನಿಜಕ್‍ಲಾ ನಮಕಾದ್ -"ದೇವೆರೆನ ನಿಯುಕ್ತಿ"

ಬೆಲೆವೆಣ್ಣು

ಅಂದು ಆಕೆಯ........ ........

( ಕ್ಷಮಿಸಿ ಸ್ನೇಹಿತರೆ, ನನ್ನ ಸ್ನೇಹಿತೆಯೊಬ್ಬರ ಪ್ರೀತಿಪೂರ್ವಕ ಅಭಿಪ್ರಾಯದ ಮೇಲಿನ ಗೌರವದಿಂದ ಈ ಕವನವನ್ನು ತೆಗೆದಿರುತ್ತೇನೆ. )

................ದೇಹವ ಮುಚ್ಚಿ-ಬೆಚ್ಚಿ ಕೂರುವಳು.


( ಈ ಕವನವನ್ನು ಬರೆದದ್ದು ೧೯-೧೦-೦೪ರಂದು, ಆದರೆ ಓದಿದವರು ಮೂರೆ-ಮೂರು ಹುಡುಗಿಯರು, ನನ್ನ ಕೆಲವು ಆತ್ಮೀಯ ಹುಡುಗರು, ಅವರ ಪರಿಚಯದ ಮೂವರು ಪತ್ರಕರ್ತರು ಮಾತ್ರ. ವರ್ಷಗಳ ನಂತರ ಈಗ ನಿಮ್ಮ ಮುಂದಿಡುತ್ತಿದ್ದೇನೆ, ಆಭಾಸವೆಂದುಕೊಳ್ಳದವರಿಗೆ-ನಾನು ಅಭಾರಿ.... ಇಲ್ಲಿ ಕಮೆಂಟ್ಸ್ ಮಾಡಲು ಮಡಿವಂತಿಕೆಯೆನಿಸಿದರೆ-ಮೈಲ್ ಮಾಡಿ )

Thursday, April 23, 2009

ನಿಮ್ಗೆ ಅದಾಗಬಲ್ಲ Guts ಇದ್ಯಾ.......??!


ಈ life ಅಂದ್ರೆ ಹಾಗೇನೇ ಕಣ್ರೀ...ಇಲ್ಲಿ status ಅನ್ನೊದು change ಆಗ್ತಾನೇ ಇರುತ್ತೆ...! ನಿನ್ನೆ ನೀವೆಲ್ಲೋ ಇದ್ರಾ...ಇವತ್ತು ಇಲ್ಲಿದ್ದೀರ...ನಾಳೆ ಇನ್ನೆಲ್ಲೋ...-ಅಂದ್ ಹಾಗೆ ನಾನು ನಿಮ್ಮ geographical locations ಬಗ್ಗೆ ಹೇಳ್ತಿಲ್ಲ..ಯಾಕಂದ್ರೆ ಅದು ನಿಮ್ಮ controlನಲ್ಲಿರೋದು ಮತ್ತು ನಿಮ್ಮ decisionsಗೆ ಬಿಟ್ಟಿದ್ದು... ನಾ ಹೇಳ್ತಿರೋದು, ನಮ್ಮ ಕೈಲಿಲ್ಲದ ಆದ್ರೂ ನಮ್ಗೆ feel ಆಗುವ-ನಾವಿರೋ state ಬಗ್ಗೆ ಅಥವಾ ಇನ್ನೊಬ್ರ lifeನಲ್ಲಿ ನಮ್ಗಿರೋ place ಬಗ್ಗೆ..ಅವ್ರ heartನಲ್ಲಿ ಅವ್ರು ನಮ್ಮನ್ನಿಡೋ place ಬಗ್ಗೆ....!!!

ಆದ್ರೆ ಇನ್ನೊಂದು angleನಿಂದ ನೋಡಿದ್ರೆ-'ಇನ್ನೊಬ್ಬರು ಏನಂದ್ಕೋತಾರೆ' ಅನ್ನೋದು ನಮ್ಗೆ immaterial ಅಲ್ವಾ?! ಹೌದ್ರೀ.. ಇನ್ನೊಬ್ಬ್ರು ನಮ್ಮನ್ನೆಷ್ಟು value ಮಾಡ್ತಾರೆ ಅನ್ನೋದಕ್ಕಿಂತ ನಮ್ಮ actual value ಏನು, ನಮ್ಮನ್ನ ನಾವೆಲ್ಲಿ place ಮಾಡ್ಕೋತೀವಿ ಅನ್ನೋದೇ importent-ಎಂಬುದೇನೋ ನಿಜ. ಆದ್ರೂನು... ಇನ್ನೊಬ್ಬ್ರು ನಮ್ಮನ್ನ ಯಾವಾಗ ಎಲ್ಲಿ place ಮಾಡ್ತಾರೆ ಅನ್ನೊದನ್ನ think ಮಾಡೇ ಮಾಡ್ತೀವಲ್ಲ...??! ಅದೊಂತರಾ human tendency ಬಿಡಿ.

ಹೌದ್ರೀ ಅಂಥ thinkingನೆಡೆಯಲ್ಲೇ ಬರೋದು ಈ ‘used and thrown’ ಅನ್ನೋ ಹುಳು...! ಈ ಥರಾ feelings ಒಮ್ಮೆ ಬಂದ್ಬಿಟ್ಟ್ರೆ ಇದೆಯಲ್ಲ...ಅಬ್ಬಾ ಮತ್ತೆ mind ಒಂದಷ್ಟು ದಿನ relax ಆಗೋದೇ ಇಲ್ಲ..ಏನೋ ಕೊರೀತಿರುತ್ತೆ ಅಲ್ವೀನ್ರೀ...?!

ಅಂದ ಹಾಗೆ ಈ feelings ಬರ್ಲಿಕ್ಕೆ reasons ಎಷ್ಟೋ ಇರ್‍ಬೋದು...ನಮ್ಮ weak minded mentalityನೂ ಇರ್‍ಬೋದು..ಆದ್ರೆ ಹೆಚ್ಚಿನ ಸಲ..ಈ ಥರಾ feelingsಗೆ reason ಆಗೋದು. at the least ಆ ಥರಾ reasonsನ realise ಮಾಡ್ಸೋದೇನಾದ್ರೂ ನಮ್ಮ dearest friendsಗಳೇ ಆಗಿರ್‍ತಾರೆ....!!!

ಒಂದಷ್ಟು ಸಮಯ ಯಾರಿಗಾದ್ರು ನಾವು ಬೇಕಾದವ್ರು ಅನ್ನಿಸ್ಕೊಂಡು...ಅಥವಾ ಅವ್ರಿಗೆ usable ಅಂಥಾದಾಗ...ನಮ್ಗೇ ಗೊತ್ತಿಲ್ಲದೇ ಒಂಥರಾ importance feel ಆಗುತ್ತೆ ನೋಡಿ... all of a sudden ಅಂಥವ್ರು ನಮ್ಮನ್ನ drop ಮಾಡಿದ್ರೆ ಇದೆಯಲ್ಲ..ಆಗ ಸ್ವಲ್ಪ hurt ಆಗೋದು ಸಹಜಾನೇ ಕಣ್ರೀ...ತುಂಬಾ feel ಕೂಡಾ ಆಗುತ್ತೆ ಅಲ್ವೇನ್ರೀ...?! ಹೌದು, ಇದು ನಮ್ಮ self respectನ shake ಮಾಡುತ್ತೆ..egoನ tease ಮಾಡುತ್ತೆ..ಹೆಚ್ಚಾಗಿ ಒಂಥರಾ ಮನ ಕದಡುತ್ತೆ...!! ಮುದುಡುತ್ತೆ ಕೂಡಾ..

But ಆ ಥರಾ dropped ಆಗಕ್ಕೆ reasons ತುಂಬಾ ಇರ್‍ಬೋದು..ನಾವು ಆ valueನ ಕಳ್ಕೊಂಡಿರಬಹುದು...ಅವ್ರನ್ನ ನಾವು satisfy ಮಾಡದಿರ್‍ಬೋದು....ಈಗ ಅವ್ರಿಗೆ ನಮ್ಮ neccessity ಇಲ್ದೇ ಇರಬಹುದು..ನಮ್ಮನ್ನ afford ಮಾಡೋ capacity ಅಥವಾ ನಮ್ಮ capabilitiesನ judge ಮಾಡೋ ability ಅವರಿಗೆ ಇಲ್ಲದೇ ಹೋಗಿರ್‍ಬೋದು...!! ಕೆಲವೊಮ್ಮೆ ನಾವು dropped ಆಗ್ದೇನೆ-ನಮ್ಗೆ ಆ ಥರಾ feel ಬಂದಿರ್‍ಬೋದು....!!!

ಹಾಗಂತ ನಾವು ಅದಕ್ಕೆ pale ಆಗೋದಿದೆಯಲ್ಲ-ಅದು biggest tragedy ಕಣ್ರೀ...ಬಹುಶಃ ನಿಮ್ಗೆ feel ಆದ್ ಹಾಗೇನೇ ನೀವು ‘Used and Thrown’ ಇರ್ಬೋದು...ಆದ್ರೆ ಅದು ಅವ್ರ foult ಕಣ್ರೀ-ನಿಮ್ದಲ್ಲ...!! ಅದು ಅವ್ರ personalityನ, mechanical mentalityನ ತೋರಿಸುತ್ತೆ..ಅಂಥವ್ರ opinionsಗೆ ಇಲ್ಲದ importanceನ್ನ ನೀವ್ಯಾಕೆ ಕೊಡ್ಬೇಕು..... after all ಅಂಥವ್ರಿಗೇಂತ ನಿಮ್ಮ lifeನಲ್ಲಿ ಜಾಗ ಮೀಸಲಿಡ್ತೀರಾ...???

ಒಮ್ಮೆ think ಮಾಡಿ ನೋಡಿ-ನೀವು valuable ಆದದ್ರಿಂದ ತಾನೆ ಒಂದೊಮ್ಮೆ ನೀವು ಅವ್ರಿಗೆ required ಅನ್ಸಿದ್ದು..?! ಮೇಲಾಗಿ ಅವ್ರ ಆ requirementsನ meet ಮಾಡಬಲ್ಲ rightest person ನೀವು ಮಾತ್ರ ಆಗಿದ್ರಿ ತಾನೇ..?!! ಈಗ ಅವ್ರಿಗೆ ನಿಮ್ಮನ್ನ value ಮಾಡಕ್ಬರದೇ...ನೀವು required ಅನ್ಸದೇ..ನಿಮ್ಮನ್ನ Use ಮಾಡಿ Throw ಮಾಡಿರ್‍ಬೋದು...But ನೀವು ಹೋಗಿ ತಿಪ್ಪೆಗೆ ಬೀಳ್ಬೇಕಾ..ಅಥ್ವಾ ತೆಪ್ಪಗಿರದೆ..lifeನಲ್ಲಿ ಮುಂದೆ ಬಂದು..ಅವರನ್ನೇ ಬೆಪ್ಪು ಬೆರಗಾಗಿಸ್ಬೇಕಾ-ಅನ್ನೋದು ನಿಮ್ಮ ಕೈಲಿದೆ..ಅಲ್ವಾ?!

ಅದೂ ಒಂಥರಾ human tendency ನೋಡಿ..tea ಕುಡಿದು paper glassನ್ನ trainನಿಂದ ಎಸೆಯಲ್ವಾ...? ಕಬ್ಬಿನ ರಸ ಹಿಂಡಿ-ಹೀರಿ ತೊಗಟೆನ ಎಸೆಯಲ್ವಾ...?? ಆ ಥರಾ..! ಆದ್ರೆ ಹಾಗಂತ ಆ Used and Thrown - paper glass ಯಾವತ್ತಾದರೂ ಅಳುತ್ತಾ?..Waste ಅನ್ಸಿದ್ದ ಕಬ್ಬಿನ ತೊಗಟೆನೂ paper industryಲಿ use ಆಗಲ್ವಾ...?!! ನಿಮ್ಗೆ ಆ ಥರಾ waste ಅನ್ನಿಸ್ಕೊಳ್ಳೋ Guts ಇದ್ಯಾ..?! ಹೌದ್ರೀ..ನೀವು Used and Thrown ಅಂದ್ರೆ ಅದರರ್ಥ-ನೀವು useless ಅಂಥ ಯಾವತ್ತೂ ಅಲ್ಲ!! ತೊಟ್ಟಿಗೆ ಎಸೆದಾಗ್ಲೂ, ಕೆಸರೆಡೆಯ ಕಸದಿಂದಲೂ ಎದ್ದು ಬರುವ daring ಒಂದಿದ್ರೆ ಸಾಕು ಬಿಡಿ..!! ಏನನ್ನೂ face ಮಾಡ್ಬೋದು. ಮತ್ತೆ ಆ ಥರಾ ಜನರಿದ್ದಾರಲ್ಲ...ನಿಮ್ಗೆ ಬೇಕೆನಿಸಿದ್ರೆ-ಒಂದು ಬಿಂದು tears ಹಾಕ್ಬಿಟ್ಟು..ಅವ್ರಿಗೆ ತಿಲಾಂಜಲಿ ಇಡಿ...ಮುಂದೊಂದು ದಿನ ಅವ್ರ necessityಗೆ ಅವ್ರೇ ನಿಮ್ಮಲ್ಲಿಗೆ ಬರ್‍ತಾರೆ-ಕಸದೊಟ್ಟಿಗೆ ಕಳಕೊಂಡ ಮೂಗುತೀನ ಹುದುಕಿದ ಹಾಗೆ-ನಿಮ್ಮನ್ನೇ ಹುಡುಕ್ತಾರೆ...ಬಿಡಿ!!

ಎಲ್ರಿಗೂ ಸುಮ್ನೆ Used and Thrown ಅನ್ಸಲ್ಲಾರಿ..ಒಂದ್ವೇಳೆ ಹಾಗೆ ಅನ್ನಿಸಿದ್ರೆ..ಅದರರ್ಥ ನೀವು Useless ಅಂಥಲ್ಲ.. ಬದಲಾಗಿ ಅವ್ರಿಗೆ ನಿಮ್ಮ value ಗೊತ್ತಿಲ್ಲಾಂತ!! ಮತ್ತು ನೀವು most usefull ಅಂಥ!! So ನೀವು ಎಲ್ಲಿಗೆ throw ಮಾಡಲ್ಪಟ್ಟರೂ, ನಿಮ್ದೇ ಹೊಸ Aim ಮತ್ತು Determinationsನೊಂದಿಗೆ Phoenix ಪಕ್ಷಿಯಂತೆ confidenceನಿಂದ ಹಾರಿ ಬನ್ನಿ..!! Good luck..!!!