Monday, January 3, 2011

ಜೀವನಕ್ಕೆ ಒಂದೇ goal ಸಾಕಾ......?!

ಇದು open goalsನ ಕಾಲ ಕಣ್ರೀ.. ಅದೇನೋ ನಮ್ಮ primary class teachers ಹೇಳ್ತಿದ್ರಲ್ಲಾ "...ಜೀವನಕ್ಕೆ ಒಂದು ಗುರಿ ಬೇಕು ಕಣೋ.. ಆ ಗುರಿಯೆಡೆಗೆ ನಡೀತಿರ್ಬೇಕು..." ಅಂತ. ಅದ್ಯಾಕೋ ಈ ಮಾತುಗಳು ಅಷ್ಟು ಸಮಂಜಸ ಅಲ್ಲವೇನೋ ಅನ್ಸೋ ಕಾಲ ಬಂದಿದೆಯೇನೋ ಅನ್ನಿಸ್ತಿದೆ... ಹಾಗಂತ ಗುರೀನೇ ಬೇಡಾಂತ ಹೇಳ್ತಿದ್ದೀನಾ...?! ಖಂಡಿತಾ ಇಲ್ಲ... ಬೇಕು.. ಗುರಿ ಇಲ್ಲದಿದ್ರೆ-ಜೀವನದ ಹಾದಿಗೆ ಗುರುತೂ ಇರಲಾರದು ಅಲ್ವಾ...?? Goal Post ಅಂತನ್ನಿಸಿಕೊಂಡದ್ದು ಒಂದು ಇಲ್ದಿದ್ರೆ, ಅದ್ಕೊಂದು ಚೌಕಟ್ಟೂ ಇಲ್ಲದಿದ್ರೆ- ಜೀವನದ ಚೆಂಡನ್ನು ಕುಟ್ಟುವುದಾದರೂ ಎಲ್ಲಿಗೆ..? ಎಲ್ಲಿ...?? ಸುಮ್ನೆ ಎಷ್ಟರವರೆಗೆಂತ ತಟ್ಟಬಹುದು? ಕಾಲ-ಕಾಲು ಸವೆಸಬಹುದು? ಅದ್ರಲ್ಲಿ ಫಲವೂ ಇಲ್ಲ.. ಸುಖವೂ ಇಲ್ಲ.. Interest ಕೂಡಾ ಉಳಿಯಲ್ಲ! ಅಲ್ವಾ?


ಆದ್ರೆ ಒಂದೇ ಗುರಿ ಅಂತಿಟ್ಕೊಂಡಿರೋಕೆ ಸಾದ್ಯಾನಾ...?! ಇಲ್ಲ ಅನ್ಸುತ್ತೆ ಅಲ್ವಾ?... ಸುಳ್ಳು ಹೇಳ್ಬೇಡಿ.. ಅನ್ನಿಸ್ತಿದೆ ಅಲ್ವಾ...?! ನಾನು ಹೇಳ್ತಿರೋದೂ ಅದನ್ನೇ.. Open goals ಅಂತ.. ಹಾಗಂತ ಅದು ಸಿಕ್ಕ-ಸಿಕ್ಕಲ್ಲಿಗ ಚೌಕಟ್ಟ ಮೀರಿ ಹೊಡೆಯೋದಲ್ಲ.. ಚೆಂಡಿಂದ ಹೊಡೆಸಿಕೊಳ್ಳೋದೂ ಅಲ್ಲ.

ನೀವು "ನೇರವಾಗಿ Indian Army General ಆಗೀನೇ ಆಗ್ಬೇಕು" ಅದ್ಕೊಂಡ್ರೆ ನಡಿಯುತ್ತಾ? ಸರಿ... Officer.. Colonel... General ಅಂತೀರಾ? Good, ನೀವು systemನ ಒಪ್ಕೋತೀರಿ ಅಂತಾಯ್ತು... ಆದ್ರೆ reality? Yes,... ನೀವು ಕನಸು ಕಾಣ್ತೀರ... ಮನಸೂ ಮಾಡ್ರೀರ... ಆದ್ರೆ ಯಾವತ್ತೋ ಚಿಕ್ಕಂದಿನಲ್ಲಿ ನಿಮ್ಗೇ ಗೊತ್ತಿಲ್ಲದೆ, ನಿಮ್ಮ ಕಾಲಿನ ಬೆರಳಿಗಾಗಿರೋ ಗಾಯ ನಿಮ್ಮನ್ನ Army join ಆಗೋದಿಕ್ಕೇ ಬಿಡದಿದ್ರೆ?... ನನಸಾಗುತ್ತಾ ನಿಮ್ಮ ಕನಸು? 'Army ಸೇರೋದಿಕ್ಕೆ ಗಾಯನೇ ಇರಬಾರ್ದು' ಅನ್ನೋ reality ನಿಮ್ಗೆ realisation ಆಗೋವರೆಗೆ ನಿಮ್ಗಿದ್ದ ಈ ಏಕೈಕ ಕನಸು ಕಮರಿ ಹೋದಾಗ ಮನಸು ಮುರಿಯುತ್ತೆ, ಬದುಕಿನ ಆಸೆ ಸೋರುತ್ತೆ. ಅಲ್ವಾ?

Medical ಓದ್ತೀನಿ ಅಂತೀರಾ?.. ನಿಮ್ಮ financial condition ಒಪ್ಪಲ್ಲ ಅಂದ್ರೆ? ಏನಾಗುತ್ತೆ...? Loan ತಗೊಳ್ಳೋದಿದ್ರೂ property details ಕೇಳ್ತಾರೆ ತಾನೆ?... ಅದ್ಕೆ ಕಣ್ರೀ ಹೇಳೋದು- ಜೀವನದಲ್ಲಿ ನಾವು flexible ಆಗಿರ್ಬೇಕೂಂತ... Goalsಗಳ ವಿಷ್ಯದಲ್ಲೂ ಅಷ್ಟೇನೆ....!!!

ಒಂದೇ ಒಂದು goal ಸಾಲ್ದು...Alternate goals ಇರ್ಬೇಕು... ಹಾಗಂತ ಏನೇನೋ ಆಗಲು ಹೋಗಿ ಕಡೆಗೆ ಏನೂ ಆಗದಿರುವುದಲ್ಲ... ಎರಡು-ಮೂರುಗಳ ಕಡೆಗೆ ನಿದ್ದೆಗೆಟ್ಟು ಕಡೇಗೆ ಸಿದ್ದಿಸಿದ ಯಾವ್ದೋ ಒಂದಕ್ಕೆ ಬಧ್ಧನಾಗೋದು, best ಅನ್ನಿಸಿಕೊಳ್ಳೋದು- ಇದೇ ಇಲ್ಲಿನ ಸಿದ್ದಾಂತ. ಅಷ್ಟೆ!!

ಸುಮ್ನೆ collegeನಿಂದ ಮಂಗ್ಳೂರಿನ Idealsಗೆ ಅಂತ ಹೊರ್ಟಿರ್ತೀರ... ಅದ್ಯಾವುದೋ ಒಂದು auto ಸಿಗುತ್ತೆ... ಆತ 'ಅನಂತಶಯನ' ಅಂತಾನೆ...OK ಹತ್ಕೊಳ್ಳಿ.... ಅಲ್ಲಿ ಮುಟ್ಟೋವಾಗ 'ಛೆ! bus standನಿಂದಾಗಿದ್ರೆ seat ಸಿಗ್ತಿತ್ತು' ಅಂದ್ಕೋತೀರಿ... ಅಷ್ಟ್ರಲ್ಲೇ ಸ್ನೇಹಿತನ bike ಸಿಗುತ್ತೆ...bus standನಲ್ಲಿ 'ಯಾಕೋ ಮುಲ್ಕಿ ಕಡೆಯಿಂದ ಹೋಗೋದೇ better' ಅನ್ಸುತ್ತಾ...? ಹಾಗೇ ಮಾಡಿ... ಬಸ್ಸು ಬಿಡೋ ಮುಂಚೆ ಲಾಲಿ ಮಾರೋ ಹುಡ್ಗ ಬಂದ್ರೆ.. ಬೇಕು ಅನ್ನಿಸಿದ್ರೆ ಅದನ್ನೂ taste ಮಾಡಿ... ನೀವು Lalbaugh ಮುಟ್ಟೋಸ್ಟ್ರಲ್ಲಿ traffic block..... bus ಮುಂದಕ್ಕೆ ಹೋಗಲ್ಲ ಅಂತಾರಾ?! Don’t worry...ಚೆನ್ನಾಗಿರೋ ice cream ತಾನೆ ಬೇಕಾಗಿರೋದು? ಇಳಿದು Pabbasಗೆ ಹೋಗ್ಬಿಡಿ.. ಅಷ್ಟೆ!! ಸ್ವಲ್ಪ dynamic ಅಥ್ವಾ flexible ಆಗಿರ್ಬೇಕಷ್ಟೆ!!!

ಈ open goals ಅನ್ನೋದು ಹುಚ್ಚರತರ ಎಲ್ಲೆಲ್ಲೋ ಹೋಗೋದಲ್ಲ... ಮನದಾಳದಲ್ಲಿ Astrophysicist ಆಗ್ಬೇಕಂದ್ಕೊಂಡು, Chemistryಲಿ Phd ಮಾಡ್ಕೊಂಡು, ಸುಮ್ನೆ primary ಶಾಲೆ physical director ಆಗ್ಬಿಡೋದಲ್ಲ. ಆತರ ಆಗ್ಲೂಬಾರ್ದು. ಅದ್ಕೆ ಮಾಡ್ಬೇಕಾದ್ದು ಇಷ್ಟೆ-' ಮಂಗ್ಳೂರು ಕಡೆ ಬಸ್ಸು ready ಇಲ್ಲ ಅಂತ ನಾರಾವಿ ಕಡೆ ಬಸ್ಸಿಗೆ ಹತ್ತದಿರೋದು!!'. ನಿಮ್ಮ goal ಮಂಗಳೂರು ಆಗಿದ್ರೆ aim ಕೂಡಾ ಅದೇ ಕಡೆಗೆ ಇರ್ಬೇಕು... ಕಡೇಗೆ journey ಕೂಡಾ!.  ‘Aim the star at least you will land at the moon’- ಅಂತಾರಲ್ಲ ಆಥರ. Astrophysicist ಅಲ್ದಿದ್ರೆ ಬರೇ Physicist ಆಗಿ, ಅಥ್ವಾ Physics ಮೇಸ್ಟ್ರಾದ್ರು ಆಗ್ಬಿಡಿ...Enjoy ಮಾಡ್ರೀರ!! ಜೊತೆಗೆ ಒಂದಷ್ಟು Astrophysicistರನ್ನ ನೀವೇ produce ಮಾಡ್ಬೋದು!!!

ಒಂದು ಹುಡ್ಗಿ Hollywood heroin ಆಗ್ಲೇಬೇಕಂದ್ಕೊಂಡ್ರೆ-ಆಗೇ ಬಿಡ್ತಾಳಾ? ಅದ್ಕೆ-Look ಮತ್ತು Luck ಎರಡೂ ಕೂಡಿ ಬರಬೇಕಲ್ವಾ? ...Luck ಆಕೇನ Hollywoodಗೆ ಮುಟ್ಸಲ್ಲ ಅಂತಿದ್ರೆ... ಆಕೆಯ 'ಕನಸಿನ kick', ಆಕೇನ modellingಗೆ ಇಳಿಯಲೂ ಬಿಡುತ್ತಿಲ್ಲ ಅಂತಾದ್ರೆ.. ಆಕೆ ಏನಾಗ್ತಾಳೋ...? ಏನೇನೂ ಆಗಲ್ಲ ಅಲ್ವಾ? '... ಸದ್ಯಕ್ಕೆ modelling ಆದ್ರೂ OK’ ಅಂತಿದ್ರೆ, ಕಡೆಗೆ Bollywoodಗಾದ್ರೂ ಮುಟ್ತಿದ್ಳೋ ಏನೋ?! ಈಗ ಹೇಳಿ flexibility ಬೇಡ್ವಾ? Bollywoodನಲ್ಲಾದ್ರೂ famous ಆಗಿ No.1 success ಅನ್ನಿಸಿಕೊಂಡ್ರೆ ನಷ್ಟ ಇದ್ಯಾ?

ವಿಷ್ಯ ಇಷ್ಟೆ- ‘Choose the best one at each stage of your life, ultimately you will reach to the best of what you really deserve’.

2 comments: