ಕನಸುಗಳೂ ಹಾಗೇನೆ....
ಕವನಗಳೂ ಹಾಗೇನೆ...
ಮೆತ್ತನೆಯ ಕನಸುಗಳೂ ಅಂತೆಯೇ
ಒತ್ತರಿಸಿ ಬರುವ ಕವನಗಂತೆ....
ಬಂದರೆ ಬರುತ್ತಲೇ ಇರುತ್ತವೆ...
ಬತ್ತಿಸಿದ ಕವನಗಳೂ ಅಂತೆಯೇ
ಬುಡಕತ್ತರಿಸಿದ ಕನಸುಗಳಂತೆ....
ಸತ್ತರೆ ಸತ್ತೇ ಹೋಗುತ್ತವೆ....
"ಅವೇನೋ ಮತ್ತೆ ಬರುತ್ತವೆ"
ಹಾಗೆಂದು- ಅವುಗಳನ್ನ
ಒತ್ತಟ್ಟಿಗಿರಿಸಿದರೆ ಮತ್ತಿಲ್ಲ...